ತೀರ್ಥಹಳ್ಳಿ :ಮಘೆ ಮಳೆಯ ಅಬ್ಬರ ಹೆಚ್ಚಾಗಿದ್ದು ವಿಪರೀತ ಗಾಳಿ ಮಳೆ ಹಿನ್ನಲೆಯಲ್ಲಿ ನದಿ ಕೊಳ್ಳಗಳು ಮೈದುಂಬಿ ಹರಿಯುತ್ತಿರುವುದರಿಂದ 18/8/25 ರ ಸೋಮವಾರ ( ಇಂದು) ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಇದನ್ನು ದುರುಪಯೋಗ ಮಾಡಿಕೊಂಡ ಕೆಲವು ಕಿಡಿಗೇಡಿಗಳು ನಾಳೆ (19 ರಂದು) ರಜೆ ಇದೆ!

ಎಂಬ ಆದೇಶ ಪ್ರತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ಈ ವಿಚಾರವಾಗಿ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಮಾನ್ಯ ತಾಲೂಕು ದಂಡಾಧಿಕಾರಿಗಳಾದ ರಂಜಿತ್ ಎಸ್ ನಾಳೆ (19-08-2025) ಯಾವುದೇ ರಜೆಯನ್ನು ಘೋಷಿಸಲಾಗಿಲ್ಲ.

Oplus_0

ಈ ತಪ್ಪು, ಕಲ್ಪಿತ ಮತ್ತು ತಪ್ಪಾಗಿ ನಿರ್ಮಿಸಲಾದ ಸಂದೇಶವು ವಿವಿಧ ಗುಂಪುಗಳಲ್ಲಿ ಹರಡುತ್ತಿದೆ. ಮತ್ತು ಅಂತಹ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮತ್ತು ಅಂತಹ ಘಟನೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.ಜೊತೆಗೆ ನಾಳೆ (19-08-2025) ರಜಾದಿನ ಇರುವುದಿಲ್ಲ. ಎಂದಿನಂತೆ ಅಂಗನವಾಡಿ, ಶಾಲೆ, ಕಾಲೇಜುಗಳು ನಡೆಯಲಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *