
ರಾಜ್ಯದ ಎಲ್ಲಾ ಶಾಲೆಗಳ ಗೋಡೆಗಳ ಮಕ್ಕಳ ಸಹಾಯವಾಣಿ-1098 ಕುರಿತು ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳು ಪದವಿ ಪೂರ್ವ ಕಾಲೇಜುಗಳ ಕಟ್ಟಡಗಳ ಸೂಕ್ತ ಸ್ಥಳಗಳ ಮೇಲೆ ಗೋಡೆ ಬರಹ ಬರೆಸುವುದು ಕಡ್ಡಾಯ ಎಂದು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಪಾಲನೆ ಮತ್ತು ರಕ್ಷಣೆ ಅವಶ್ಯಕತೆ ಇರುವ ಮಕ್ಕಳು ಸೇರಿದಂತೆ ಎಲ್ಲಾ ಮಕ್ಕಳಿಗೆ ತುರ್ತು ಸೇವೆಯನ್ನು ಒದಗಿಸುವ 24*7 ಉಚಿತ ಮಕ್ಕಳ ಸಹಾಯವಾಣಿ- 1098 ಕುರಿತು ಹೆಚ್ಚಿನ ಪ್ರಚಾರ ನೀಡುವ ಕುರಿತಂತೆ ಸಾರ್ವಜನಿಕರಲ್ಲಿ ಹಾಗೂ ಮಕ್ಕಳಲ್ಲಿ ಅರಿವು ಮೂಡಿಸುವ ಮೂಲಕ ಮಕ್ಕಳ ಘನತೆಯ ಬದುಕಿನ ನಿರ್ಮಾಣ ಮಾಡಬೇಕಾಗಿರುವುದರಿಂದ

ಹಾಗೂ ಮಕ್ಕಳ ರಕ್ಷಣೆ ಎಲ್ಲರ ಕರ್ತವ್ಯವಾಗಿದ್ದು ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಮಕ್ಕಳ ಸಹಾಯವಾಣಿ 1098 ಕುರಿತು ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳು ಪದವಿ ಪೂರ್ವ ಕಾಲೇಜುಗಳ ಕಟ್ಟಡಗಳ ಸೂಕ್ತ ಸ್ಥಳಗಳ ಮೇಲೆ ಗೋಡೆ ಬರಹ ಬರೆಸಲು ಹಾಗೂ ಎಲ್ಲಾ ಶಾಲೆಗಳ ವೆಬ್ಸೈಟ್ ನಲ್ಲಿ 1098 ಕುರಿತು ಮಾಹಿತಿ ಪ್ರಕಟಿಸಲು

ಬೆಳಗಿನ ಶಾಲಾ ಅಸೆಂಬ್ಲಿ ಪ್ರಾರ್ಥನೆ ಸಮಯದಲ್ಲಿ ಮಕ್ಕಳಿಗೆ ಮಾಹಿತಿ ನೀಡಲು ಮಕ್ಕಳಿಗಾಗಿ ಸಿದ್ಧಪಡಿಸುವ ಎಲ್ಲಾ ಪುಸ್ತಕ ಹಾಗೂ ನೋಟ್ ಬುಕ್ಗಳ ಮೇಲೆ ಹಾಗೂ ಎಲ್ಲಾ ಪುಟಗಳ ಕೆಳ ಭಾಗದಲ್ಲಿ ಲೇಬರ್ ಮೇಲೆ ಈ ಮಾಹಿತಿ ಪ್ರಕಟಿಸಲು ಉಲ್ಲೇಖಿತ ಪತ್ರದಲ್ಲಿ ನಿರ್ದೇಶಿಸಲಾಗಿರುತ್ತದೆ.