- ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ


ಕನ್ನಡ ಸಾಹಿತ್ಯ ಪರಿಷತ್ತು ಆಗುಂಬೆ ಹೋಬಳಿ ಘಟಕ ಕಮ್ಮರಡಿ, ಲಯನ್ಸ್ ಕ್ಲಬ್ ಕನ್ನಡ, ಸಾಹಿತ್ಯ ಮತ್ತುಸಾಂಸ್ಕೃತಿಕ ವೇದಿಕೆ ತೀರ್ಥಹಳ್ಳಿ, ಕರ್ನಾಟಕ ಜಾನಪದ ಪರಿಷತ್ತು ತೀರ್ಥಹಳ್ಳಿ, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕಮ್ಮರಡಿ ಘಟಕ, ಸ್ವಯಂ ಸೇವಾ ಟ್ರಸ್ಟ್ ಕಮ್ಮರಡಿ ಇವರ ಸಹಯೋಗದಲ್ಲಿ ದಿ. 27 ರ ಬುಧವಾರದಂದು 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬಹಳ ಅಚ್ಚುಕಟ್ಟಾಗಿ ಕಾರ್ಯಕ್ರಮ ನೆರವೇರಿತು.


ಈ ಕಾರ್ಯಕ್ರಮವನ್ನು ಪ್ರಾರ್ಥನೆ ಹಾಗೂ ನಾಡಗೀತೆಯೊಂದಿಗೆ ಪ್ರಾರಂಭಿಸಿದ್ದು,ಹಿರಿಯ ಸಾಹಿತಿ ಹಾಗೂ ನಿವೃತ್ತ ಉಪನ್ಯಾಸಕರಾದ ಶ್ರೀಮತಿ ಕೆ ಆರ್ ಉಮಾದೇವಿ ಊರಾಳ್ ಕಾರ್ಯಕ್ರಮದ ಉದ್ಘಾಟನೆ ಮಾಡಿದರು.ಕಾರ್ಯಕ್ರಮದ ಪ್ರಸ್ತಾವಿಕ ನುಡಿಯನ್ನು ಶ್ರೀಮತಿ ರೇಣುಕಾ ಹೆಗಡೆ ನಡೆಸಿಕೊಟ್ಟರು.


ಈ ವೇಳೆ ಎಸ್ ಎಸ್ ಎಲ್ ಸಿ ಕನ್ನಡ ಮದ್ಯಮದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಹಾಗೂ ಪಿ ಯುಸಿ ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಆಗುಂಬೆ ಹೋಬಳಿ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.ಕಾರ್ಯಕ್ರಮದ ಕೇಂದ್ರ ಬಿಂದು ಶ್ರೀಮತಿ ಕೆ ಆರ್ ಉಮಾದೇವಿ ಊರಾಳ್ ಇವರಿಗೆ ತವರೂರ ಸನ್ಮಾನ ಮಾಡಿ ಫಲ ತಾಂಬೂಲ ನೀಡಿ ಗೌರವಿಸುವ ಅಭಿನಂದನೆ ಸಲ್ಲಿಸಲಾಯಿತು.

ಕಾರ್ಯಕ್ರಮದ ಅತೀ ಮುಖ್ಯ ಘಟಕವಾದ ರಾಜ್ಯೋತ್ಸವ ಪ್ರಶಸ್ತಿಗೆ ಪಶು ವೈದ್ಯರಾದ ಮುರುಳಿದರ್ ಕಿರಣ್ ಕೆರೆ, ಸಹಕಾರಿಗಳಾದ ಯು ಎಸ್ ಮೋಹನ್ ಕಡ್ತೂರು, ವಿಶ್ವತೀರ್ಥ ಶಾಲೆಯ ಮುಖ್ಯ ಶಿಕ್ಷಕರಾದ ಎನ್ ಟಿ ಸುರೇಶ್,ಚಿತ್ರ ಕಲಾವಿದರಾದ ಸ್ಫೂರ್ತಿ ಗೌಡ, ಅರೇಹಳ್ಳಿ ಮುಖ್ಯ ಶಿಕ್ಷಕರಾದ ನಾಗರಾಜ್ ಆರ್ ಎ ಭಾಜನಾರಾದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಲಯನ್ಸ್ ಕ್ಲಬ್ ಆಗುಂಬೆಯ ಮಂಜುನಾಥ್ ಆಚಾರ್ಯ, ಕನ್ನಡ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾದ ರೇಣುಕಾ ಹೆಗಡೆ, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷರಾದ ಶ್ರೀಮತಿ ಲೀಲಾವತಿ ಜಯಶೀಲ, ಸೀನಿಯರ್ ಚೆಂಬರ್ ಇಂಟರ್ ನ್ಯಾಷನಲ್

ಕಮ್ಮರಡಿ ಘಟಕದ ಅಧ್ಯಕ್ಷರಾದ ಶಿವಪ್ಪ ಹೊನಗಾರು, ಸ್ವಯಂ ಪ್ರೇರಣಾ ಟ್ರಸ್ಟ್ ಅಧ್ಯಕ್ಷರಾದ ನಿತ್ಯಾನಂದ ಅಣುಗೋಡು, ಅರೇಹಳ್ಳಿ ಗ್ರಾಂ ಪಂ ಅಧ್ಯಕ್ಷರಾದ ಶ್ರೀಲತಾ ದಿನೇಶ್, ವಿಶ್ವತೀರ್ಥ ಟ್ರಸ್ಟ್ ನ ಅಧ್ಯಕ್ಷರಾದ ನೀಲಕಂಠಪ್ಪ ಹಾಗೂ ಸ್ಥಳೀಯರು ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಶಿಕ್ಷಕರು, ಶಿಕ್ಷಕಿಯರು,ಪೋಷಕರು ಮಕ್ಕಳು ಇದ್ದರು.




