- ಕನ್ನಡ ಹಬ್ಬಕ್ಕೆ ಅಧ್ಯಕ್ಷರಾದ ಪಡುವಳ್ಳಿ ಹರ್ಷೇಂದ್ರ ಕುಮಾರ್ ಕರೆ
- ಧ್ವಜಾರೋಹಣ, ಉದ್ಘಾಟನೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ
ಶಿವಮೊಗ್ಗ : ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಶೀರೂರಿನ ಶ್ರೀ ಏಳು ಮಕ್ಕಳ ಚೌಡೇಶ್ವರಿ ಸೇವಾ ಸಮಿತಿ ಎಸ್ ಸಿ ಎಸ್ ಟಿ (ರಿ )ಹಾಗೂ ಶಾಂತವೇರಿ ಗೋಪಾಲಗೌಡ ಕನ್ನಡ ಸೇವಾ ಸಮಿತಿ ಪಡುವಳ್ಳಿ ಇವರ ನೇತೃತ್ವದಲ್ಲಿ ದಿ 01- 11-2024ನೇ ಶುಕ್ರವಾರ ಬೆಳಿಗ್ಗೆ 8 -30 ಕ್ಕೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಂತವೇರಿ ಗೋಪಾಲ ಗೌಡ ಕನ್ನಡ ಸೇವಾ ಸಮಿತಿ ಅಧ್ಯಕ್ಷರಾದ ಪಡುವಳ್ಳಿ ಹರ್ಷೇಂದ್ರ ಕುಮಾರ್ ವಹಿಸಲಿದ್ದು, ಧ್ವಜಾರೋಹಣ ಕಾರ್ಯಕ್ರಮವನ್ನು ನಾಬಳ ಶಚಿಂದ್ರ ಹೆಗಡೆ,ಗ್ಯಾರೆಂಟಿ ಯೋಜನೆ ಪ್ರಾಧಿಕಾರ ಕರ್ನಾಟಕ ಸರ್ಕಾರ ಇವರು ನೆರವೇರಿಸಲಿದ್ದಾರೆ. ಉದ್ಘಾಟನೆಯನ್ನು ಹೊನ್ನೇತಾಳು ಗ್ರಾಂ ಪಂ ಸದಸ್ಯರಾದ ಹೆಚ್ ಶ್ರೀಮತಿ ಭಾಗ್ಯ ಪಡುವಳ್ಳಿ ಮಾಡಲಿದ್ದಾರೆ. ನಿವೃತ್ತ ಶಿಕ್ಷಕರಾದ ಪಡುವಳ್ಳಿ ಕಿಟ್ಟಪ್ಪ ಸ್ವಾಗತ ಭಾಷಣ ಮಾಡಲಿದ್ದು, ತಮ್ಮೆಲ್ಲರನ್ನು ಕಾರ್ಯಕ್ರಮಕ್ಕೆ ಪ್ರೀತಿಯಿಂದ ಆಹ್ವಾನಿಸಿದ್ದಾರೆ.
ಕಾರ್ಯಕ್ರಮದಲ್ಲಿ ಜಾವಗಲ್ ರಾಮಸ್ವಾಮಿ,ಪುಟ್ಟಸ್ವಾಮಿ ಜಾವಗಲ್, ಕೋಟೆಗುಡ್ಡೆ ಸುರೇಶ್ ಗೌಡ,ಪಿ ಕೆ ಲೋಕಪ್ಪ, ಶ್ರೀಮತಿ ಶೀಲಾ ಲಕ್ಷ್ಮಣ್, ಶ್ರೀಮತಿ ಆಶಾ ಲತಾ ನಾಗರಾಜ್, ಹಾಗೂ ಸನ್ಮಾನಿತರಾದ ಶ್ರೀನಿವಾಸ್ ಮೆಸ್ಕಾಂ ಇಲಾಖೆ ಮೇಗರವಳ್ಳಿ, ಅರುಣ್ ಮಂಜುನಾಥ್ ಸತ್ಯಶೋಧ ನ್ಯೂಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.










