■ ಕನ್ನಡ ಸಾಹಿತ್ಯ ಪರಿಷತ್ತು ಆಗುಂಬೆ ಘಟಕ ಹಾಗೂ ಲಯನ್ಸ್ ಕ್ಲಬ್ ಸಹಯೋಗ ■ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ

ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕಮ್ಮರಡಿ ವಿಶ್ವತೀರ್ಥ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಆಗುಂಬೆ ಘಟಕ ಹಾಗೂ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನೆರವೇರಿತು.

*ಸ್ವಾಗತ ಭಾಷಣ* ವನ್ನು ಶಿಕ್ಷಕರಾದ *ಸುಬ್ರಮಣ್ಯ ಎಸ್,ವಿಜಯ ಲಕ್ಷ್ಮಿ* ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಕನ್ನಡಾಂಬೆಗೆ ಪುಷ್ಪ ನಮನ ದೊಂದಿಗೆ ಉದ್ಘಾಟನೆಯನ್ನು ವೇದಿಕೆಯಲ್ಲಿದ್ದ ಕನ್ನಡ ಸಾಹಿತ್ಯ ಪರಿಷತ್ತು ಆಗುಂಬೆ ಘಟಕದ ಅಧ್ಯಕ್ಷರಾದ ವೆಂಕಟೇಶ್ ಎನ್ ಜಿ, ಆಗುಂಬೆ ಲಯನ್ಸ್ ಕ್ಲಬ್ ಅಧ್ಯಕ್ಷೆಯಾದ ವೀಣಾ ಗಿರೀಶ್, ಸಂಪನ್ಮೂಲ ವ್ಯಕ್ತಿಗಳಾದ ಡಾ ಮುರುಳಿದರ ಕಿರಣಕೆರೆ,ವಿಶ್ವತೀರ್ಥ ಶಾಲೆಯ ಮುಖ್ಯೋಪಾಧ್ಯಾಯರಾದ ಎನ್ ಟಿ ಸುರೇಶ್ ,ಪ್ರಶಾಂತ್ ಕಾಳಿಂಗ ಮನೆ ದೀಪ ಬೆಳಗಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಆಗುಂಬೆ ಘಟಕ ಶುರುವಾಗಿ 9 ತಿಂಗಳಲ್ಲಿ ಇದೊಂದು ವಿಶೇಷ ಕಾರ್ಯಕ್ರಮವಾಗಿದ್ದು,ಇದೆ ವೇಳೆ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ನಿತ್ಯಾನಂದ ಅಣುಗೋಡು, ರಾಮಚಂದ್ರ (ಅಣ್ಣಯ್ಯ) ಅಂಬರೀಶ್ ಬಸವಾನಿ,ಶಿವಪ್ಪ (ಅಂಚೆ ಕಚೇರಿ ಸಹಾಯಕರು),ಹಾಗೂ ವಿಗ್ನೇಶ್ ಕಾಮತ್ ಇವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಕೇಂದ್ರ ಬಿಂದುವಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಡಾ ಮುರುಳಿದರ್ ಕಿರಣ್ ಕೆರೆ ಮಾತನಾಡಿ ” ನಮಗೆ ಇದು 50 ನೇ ವರ್ಷದ ಸಂಭ್ರಮ, ಕರ್ನಾಟಕ ಭೂಪಟವು ಗೋಡಂಬಿಯಾಕಾರ ಹೊಂದಿದ್ದ ಪೌಷ್ಟಿಕ ಆಹಾರ ಮತ್ತು ರುಚಿಯಾದದ್ದು ಜೊತೆಗೆ ಕನ್ನಡವು ಅಂತೆಯೇ ಸಿಹಿ ಎಂದರು”.
ನಾಡು, ನುಡಿ, ಭಾಷೆ, ಸಾಹಿತ್ಯ, ಕಲಿಕೆ, ಸಂಪ್ರದಾಯದ ಜೊತೆಗೆ ಭಾಷೆಯ ಬಳಕೆ, ಇಂಗ್ಲಿಷ್ ಮೇಲಿನ ಕೀಳರಿಮೆ ದೂರವಾಗಲಿ ಕನ್ನಡ ನಾಡು ಕಟ್ಟುವಲ್ಲಿ ಶ್ರಮವಹಿಸಿ ಎಂದು ಮಕ್ಕಳಿಗೆ ತಿಳಿಹೇಳಿದರು.
*ವೀಣಾ ಗಿರೀಶ್* ಮಾತನಾಡಿ “ಹಿರಿಯರಲ್ಲಿ ಗೌರವ ಕಿರಿಯರಿಗೆ ಪ್ರೋತ್ಸಾಹದ ಜೊತೆಗೆ ಕನ್ನಡದ ಬಗ್ಗೆ ಅಭಿಮಾನವಿರಲಿ, ನಿಮ್ಮೊಂದಿಗೆ ನಾನು ಇದ್ದಿದ್ದು ಸಂತೋಷವಾಗಿದೆ” ಎಂದರು.
*ವೆಂಕಟೇಶ್ ಎನ್ ಜಿ* ಮಾತನಾಡಿ “1956 ನ 1 ರಂದು ಕರ್ನಾಟಕ ನಾಮಕರಣವಾಗಿದೆ. ಈ ಸಡಗರವನ್ನು ನಾವೆಲ್ಲರೂ ಸಂಭ್ರಮಿಸೋಣ.ಇಲ್ಲಿ ಹುಟ್ಟಿದ ನಾವೇ ಧನ್ಯರು,ಕನ್ನಡದ ಏಳಿಗೆಗೆ ನಾವೆಲ್ಲರೂ ಶ್ರಮಿಸೋಣ” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸೇರಿದ ಎಲ್ಲರನ್ನು ಲಯನ್ಸ್ ಕ್ಲಬ್ ನ ಕಾರ್ಯದರ್ಶಿ ಅರುಣ್ ಗುಡ್ಡೇಕೇರಿ ವಂದಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಆಗುಂಬೆ ಘಟಕದ ಪದಾಧಿಕಾರಿಗಳು,ಶಿಕ್ಷಕರು,ಪೋಷಕರು ಪುಟಾಣಿ ಮಕ್ಕಳು ಇದ್ದರು.