
ಕಾಂತಾರ ಚಾಪ್ಟರ್ 1’ ಸಿನಿಮಾದ ಚಿತ್ರೀಕರಣ ಆರಂಭ ಶುರುವಿನಿಂದಲೂ ಒಂದಲ್ಲ ಒಂದು ಸಮಸ್ಯೆಗಳು ರಿಷಬ್ ಶೆಟ್ಟಿ ಹಾಗೂ ಅವರ ತಂಡವನ್ನು ಪೀಡಿಸುತಿದೆ.

ಈ ಹಿಂದೆ ಸಿನಿಮಾ ಶೂಟಿಂಗ್ನಲ್ಲಿ ಭಾಗಿ ಆಗಿದ್ದ ಮೂರು ಮಂದಿ ಕಲಾವಿದರು ನಿಧನ ಹೊಂದಿದ್ದಾರೆ. ಇದೀಗ ಮತ್ತೊಂದು ಅವಘಡ ಸಂಭವಿದ್ದು ಸದ್ಯ ಯಾವುದೇ ಪ್ರಾಣಾಪಾಯ ವಾಗಿಲ್ಲ ಎಂದು ವರದಿಯಾಗಿದೆ.

‘ಕಾಂತಾರ ಚಾಪ್ಟರ್ 1’ ಸಿನಿಮಾದ ಚಿತ್ರೀಕರಣ ನಡೆಸಲಾಗುತ್ತಿದ್ದ ಬೋಟ್ ಮಗುಚಿದ್ದು ಬೋಟ್ನಲ್ಲಿ ರಿಷಬ್ ಶೆಟ್ಟಿ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಮಂದಿ ಕಲಾವಿದರು, ಹಾಗೂ ತಂತ್ರಜ್ಞರು ಇದ್ದರೆಂದು ತಿಳಿದುಬಂದಿದೆ.

ಚಿತ್ರೀಕರಣ ಚಾಲ್ತಿಯಲ್ಲಿರುವಾಗಲೇ ಬೋಟು ಮುಗಿಚಿದೆ ಆದರೆ ಯಾವುದೇ ಜೀವ ಹಾನಿ ಆಗಿಲ್ಲ. ಕಲಾವಿದರು, ತಂತ್ರಜ್ಞರೆಲ್ಲರೂ ಈಜಿ ದಡಕ್ಕೆ ಬಂದಿದ್ದಾರೆ.

