Oplus_131072

ಕರ್ನಾಟಕ ನೇತಾಜಿ ಚಾರಿಟಬಲ್ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗ – ನಾಟಿ ಔಷಧಿ ನೀಡುವಲ್ಲಿ ರಾಘವೇಂದ್ರ ಬೋಬ್ಬಿ ರಾಜ್ಯದಲ್ಲೇ ಹೆಸರುವಾಸಿ

Oplus_131072

ತೀರ್ಥಹಳ್ಳಿ : ಜ 13 ರಂದು ರವೀಂದ್ರ ಕಲಕ್ಷೇತ್ರದಲ್ಲಿ ನಡೆದ ಸಂಕ್ರಾಂತಿ ಉತ್ಸವದಲ್ಲಿ ನಾಡಿನ ಏಳಿಗೆಗಾಗಿ ಶ್ರಮಿಸಿದ ಹಾಗೂ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಪ್ರತಿಷ್ಠಿತ ಪ್ರಶಸ್ತಿ ನೀಡಿದ್ದು, ಈ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿ ಬೋಬ್ಬಿಯ ಹೆಸರಾಂತ ನಾಟಿ ವೈದ್ಯರಾದ ರಾಘವೇಂದ್ರ ಕೆ ಜಿ ಇವರಿಗೆ ಕರ್ನಾಟಕ ರತ್ನ ಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದು ತೀರ್ಥಹಳ್ಳಿಗೆ ಮತ್ತೊಂದು ಹೆಮ್ಮೆಯ ಗರಿಸಿಕ್ಕಂತಾಗಿದೆ.

ರಘುವೇಂದ್ರರವರು ನಾಟಿ ಮನೆ ಎಂದೇ ಪ್ರಸಿದ್ದಿ ಪಡೆದ ಇವರು ಮಂಡಿ ನೋವು, ಮೂಳೆ ಸೆಳೆತ, ಸಂಧಿವಾತ, ಬೆನ್ನು ಹಾಗೂ ಸೊಂಟ ನೋವಿಗೆ ತಾವೇ ಸ್ವತಃ ತಯಾರು ಮಾಡಿದ ತೈಲದ ಮೂಲಕ ಗುಣಪಡಿಸುತ್ತಾರೆ. ಕೆಮ್ಮು, ಕಫ, ಡಯಬಿಟಿಸ್,ಸ್ಟ್ರೋಕ್, ಕೂದಲು ಉದುರುವಿಕೆ, ತಲೆ ಹೊಟ್ಟು ನಿಯಂತ್ರಣ, ವೆರಿಕೊಸ್ ಸೇರಿದಂತೆ ಹಲವಾರು ರೋಗಗಳಿಗೆ ಔಷಧಿ ಸೈ ಎನಿಸಿಕೊಂಡಿದ್ದಾರೆ.ಇವರಿಗೆ ಮತ್ತಷ್ಟು ಪ್ರಶಸ್ತಿ ಸನ್ಮಾನಗಳು ದೊರೆಯಲಿ ಎಂಬುದು ಸತ್ಯಶೋಧ ಮಾಧ್ಯಮದ ಆಶಾಯವಾಗಿದೆ.

Oplus_131072

Leave a Reply

Your email address will not be published. Required fields are marked *