
ಪೊಲೀಸರ ಮಿಂಚಿನ ಕಾರ್ಯಚರಣೆಗೆ ಸಾರ್ವಜನಿಕ ಮೆಚ್ಚುಗೆ – ಸತ್ಯಶೋಧ ನ್ಯೂಸ್ ವರದಿ ಫಲಶ್ರುತಿ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯ ಕಟ್ಟೆಹಕ್ಕಲು ಗ್ರಾಮದ ಸರ್ಕಲ್ ದಿನಾಂಕ: 25-01-2026 ರಂದು ಬೆಳಗಿನ ಜಾವ 03.00 ಗಂಟೆಯ ಸಮಯದಲ್ಲಿ ಕಳ್ಳರು ದೇವರಾಜ ಎಂ.ಎಸ್ ಬಿನ್ ಎಂ.ವಿ ಶ್ರೀನಿವಾಸ ಗೌಡ ವಾಸ ತುಂಬ್ರಿಮನೆ ಗ್ರಾಮ ರವರು ತಮಗೆ ಸೇರಿದ ಸುಮಾರು 12,000/- ರೂ ಮೌಲ್ಯದ ಹಸುವನ್ನು ಕಾರಿನಲ್ಲಿ ವಧೆಮಾಡಿ

ಮಾಂಸ ಮಾಡಿ ಮಾರಾಟ ಮಾಡುವ ಸಲುವಾಗಿ ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಪ್ರಕರಣಕ್ಕೆ ಸಬಂಧಿಸಿದಂತೆ 27-01-2026 ರಂದು ನೀಡಿದ ದೂರಿನ ಮೇರೆಗೆ ತೀರ್ಥಹಳ್ಳಿ ಪೊಲೀಸ್ ಠಾಣಾ ಗುನ್ನೆ ನಂ. 41/2026 ಕಲಂ: 303(2) ಬಿ.ಎನ್.ಎಸ್ ಮತ್ತು ಕಲಂ 04,05,12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿದೇಯಕ ಕಾಯ್ದೆ ರೀತ್ಯ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು, ಸದರಿ ಪ್ರಕರಣಗಳಲ್ಲಿ ಆರೋಪಿ ಮತ್ತು ಮಾಲು ಪತ್ತೆಗಾಗಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳು ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಡಿವೈಎಸ್ ಪಿ ಅರವಿಂದ ಕಲಗುಂಜಿ,

ಸೂಚನೆಯಂತೆ ಒಂದು ವಿಶೇಷ ತಂಡವನ್ನು ರಚಿಸಿ ಅದರಂತೆ ತೀರ್ಥಹಳ್ಳಿ ಪೊಲೀಸ್ ಠಾಣಾ ನಿರೀಕ್ಷಕರಾದ ಇಮ್ರಾನ್ ಬೇಗ್ ಹಾಗೂ ಸಿಬ್ಬಂದಿಗಳಾದ ಸಿ.ಹೆಚ್.ಸಿ. ಲಿಂಗೇಗೌಡ, ಕುಮಾರ್, ವಿಜಯ್, ಸಿಪಿಸಿ ವೀರೇಂದ್ರ, ಪ್ರಸಾದ್, ದೀಪಕ್, ಮಂಜುನಾಥ ಹಂಪಿಹೊಳಿ, ಮಂಜುನಾಥ ದೋಣಿಕಲ್, ಮೋಹನ, ವಿಜಯ ಕುಮಾರ್ ರವರನ್ನು ಒಳಗೊಂಡ ವಿಶೇಷ ತಂಡವನ್ನು ರಚನೆ ಮಾಡಿ ಆರೋಪಿಗಳನ್ನು ವಿಶೇಷ ಮಾಹಿತಿ ಆಧರಿಸಿ ಪತ್ತೆ ಹಚ್ಚಲಾಗಿ, ಕಳ್ಳತನ ನಡೆಸಿದ ಆರೋಪಿತರಾದ 1) ಮುಬಾರಕ್ ತಂದೆ ಖಾಜೀಮ್ ಸಾಬ್, 25 ವರ್ಷ, ಮುಸ್ಲಿಂ ಜನಾಂಗ, ವಾಸ 7 ನೇ ಕ್ರಾಸ್ ಆರ್.ಎಂ.ಎಲ್. ನಗರ, ಶಿವಮೊಗ್ಗ, 2) ಅಹ್ಮದ್ ಬೇಗ್ ತಂದೆ ಚಾಂದ್ ಪಾಷ, 25 ವರ್ಷ, ಮುಸ್ಲಿಂ ಜನಾಂಗ, ಫರ್ನಿಚರ್ ಕೆಲಸ, ವಾಸ ಟಿಪ್ಪುನಗರ 02 ನೇ ಕ್ರಾಸ್ ಎಡಭಾಗ, ಶಿವಮೊಗ್ಗ, 3) ಮುಕ್ರಮ ವುಲ್ಲಾ ತಂದೆ ಹಬೀಬುಲ್ಲಾ, 21 ವರ್ಷ, ಮುಸ್ಲಿಂ ಜನಾಂಗ, ವೆಲ್ಡಿಂಗ್ ಕೆಲಸ, ವಾಸ ಟಿಪ್ಪುನಗರ 2 ನೇ ಕ್ರಾಸ್ ಎಡಭಾಗ, ಶಿವಮೊಗ್ಗ ರವರನ್ನು ಈ ದಿನ ದಿನಾಂಕ: 06-02-2026 ರಂದು ವಶಕ್ಕೆ ಪಡೆದುಕೊಂಡು ಆರೋಪಿತರಿಂದ ಕೃತ್ಯಕ್ಕೆ ಬಳಸಿದ 2,00,000/- ರೂ ಮೌಲ್ಯದ ರಿಡ್ಜ್ ಕಾರ್ನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡ ಆಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಮಾನ್ಯ ಪೊಲೀಸ್ ಆಧೀಕ್ಷಕರು ಅಭಿನಂದಿಸಿರುತ್ತಾರೆ.

