• ಲಕ್ಷ್ಮೀ ಆರಾದನೆಗೆ ಸಮಯ ಯಾವುದು

ಶುಕ್ರವಾರ ಲಕ್ಷ್ಮಿ ಆರಾಧನೆಎಗೆ ವಿಶೇಷವಾದ ದಿನ, ಆದರೆ ಕೆಲ ವಿಶೇಷ ಸಂದರ್ಭದಲ್ಲಿ ಲಕ್ಷ್ಮಿಯನ್ನು ಆರಾಧಿಸಿದರೆ ಲಕ್ಷ್ಮಿ ಕೃಪೆ ಸದಾ ನಮ್ಮ ಮೇಲಿರುತ್ತದೆ ಎಂದು ಹೇಳಲಾಗುವುದು ಪ್ರತೀತಿ .ವರಮಹಾಲಕ್ಷ್ಮಿಯ ದಿನದಂದು ಅಷ್ಟಲಕ್ಷ್ಮಿಯನ್ನು ಪೂಜಿಸಲಾಗುವುದು. ಈ ವರ್ಷ ಆಗಸ್ಟ್‌ 16ರಂದು ವರಮಹಾಲಕ್ಷ್ಮಿ ವ್ರತವನ್ನು ಆಚರಿಸಲಾಗುತ್ತಿದೆ.ಪೂಜೆಯ ಸಮಯ ಸಿಂಹ ಲಗ್ನದಲ್ಲಿ ಬೆಳಗ್ಗೆ 05:54ರಿಂದ 08:13ರೊಳಗ ಪೂಜಿಸಬೇಕು.ನಂತರ ಮಧ್ಯಾಹ್ನ ವೃಶ್ಚಿಕ ಲಗ್ನ ಮಧ್ಯಾಹ್ನ 12:53 ರಿಂದ 03:13 ರವರೆಗೆ ಸಮಯವಿದೆ.ನಂತರ ಪ್ರದೋಷ ಅಂದರೆ ಸಂಜೆಯ ಸಮಯದಲ್ಲಿ ಮಾಡಬಹುದು.ವರಮಹಾಲಕ್ಷ್ಮಿ ಹಬ್ಬದಂದು ಅಷ್ಟಲಕ್ಷ್ಮಿಯರ ಆರಾಧನೆ ಮಾಡಿದರೆ ಅಷ್ಟಲಕ್ಷ್ಮಿಯರಾದ ಆದಿಲಕ್ಷ್ಮಿ, ಧನಲಕ್ಷ್ಮಿ, ಧಾನ್ಯಲಕ್ಷ್ಮಿ, ಗಜಲಕ್ಷ್ಮಿ, ಸಂತಾನಲಕ್ಷ್ಮಿ, ವೀರಲಕ್ಷ್ಮಿ, ವಿಜಯಲಕ್ಷ್ಮಿ ಮತ್ತು ವಿದ್ಯಾಲಕ್ಷ್ಮಿ ಯ ಕೃಪೆ ದೊರೆಯಲಿದೆ

Leave a Reply

Your email address will not be published. Required fields are marked *