- ಪೋಲೀಸರಿಂದ ಸ್ಥಳ ಮಹಜರು
- ಆರೋಪಿಗೆ ಕಠಿಣ ಶಿಕ್ಷೆಯಾಗಲಿ – ಅಕ್ರೋಶ

ಮದುವೆ ಮಾಡಲು ನಿರಾಕರಿಸಿದ ಹಿನ್ನಲೆ ಕೋಪಗೊಂಡ ಪಾಗಲ್ ಪ್ರೇಮಿಯೊಬ್ಬ ಬಾಲಕಿಯನ್ನು ಕೊಲೆ ಮಾಡಿ ರುಂಡದೊಂದಿಗೆ ಪರಾರಿ ಆಗಿದ್ದ, ಸೋಮವಾರಪೇಟೆ ಪೊಲೀಸರು ಆರೋಪಿಯನ್ನು ಸೆರೆ ಹಿಡಿಯಲು ಶೋಧ ಕಾರ್ಯ ಮುಂದುವರೆಸಿದ್ದು ಇದೀಗ ಆರೋಪಿ ಪ್ರಕಾಶ್ ಹಾಗೂ ಮರದ ಮೇಲೆ ಇರಿಸಿದ್ದ. ಬಾಲಕಿಯ ತಲೆ ಹಾಗೂ ಆಕೆಯ ಚಪ್ಪಲಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಜೊತೆಗೆ ಪೊಲೀಸರು ಸ್ಥಳ ಮಹಜರು ಮಾಡುವ ವೇಳೆ ಕೊಲೆ ಮಾಡಿದ್ದ ಸ್ಥಳವನ್ನು ಆರೋಪಿ ಪ್ರಕಾಶ್ ತೋರಿಸಿದ್ದಾನೆ.ಇನ್ನು ಬಾಲಕಿಯ ರುಂಡವನ್ನು ನೋಡಿ ಸೋದರ ವಿಚಿತ್ರವಾಗಿ ವರ್ತಿಸಿದ್ದು ಪೋಷಕರು ಹಾಗೂ ಸ್ಥಳೀಯರು ಸಮಾಧಾನ ಮಾಡಿದ್ದಾರೆ. ಪ್ರಕಾಶ್ ಗೆ ಕಠಿಣ ಶಿಕ್ಷೆಯಗಲು ರಾಜ್ಯದೆಲ್ಲೆಡೆ ಆರೋಪಿ ವಿರುದ್ಧ ಅಕ್ರೋಶ ವ್ಯಕ್ತವಾಗಿದೆ.


