

ಡೆತ್ ನಲ್ಲಿ ಫೈನಾನ್ಸ್ ಕಿರುಕುಳ ಹಾಗೂ ಇಬ್ಬರಿಂದ ಮಾನಸಿಕ ಹಿಂಸೆ – ಮೃತ ನಾಗರಾಜ್
ಶಿವಮೊಗ್ಗ : ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಕೋಣಂದೂರು ನಲ್ಲಿ ವ್ಯಕ್ತಿಗಳ ಕಾಟಕ್ಕೆ ಬೇಸತ್ತು ಆತ್ಮ ಹತ್ಯೆಗೆ ಶರಣಾಗಿದ್ದ ಘಟನೆ ನಡೆದಿದೆ.ನಾಗರಾಜ್ ಎಂಬುವರ ಮನೆಯ ದಾಖಲೆಗಳನ್ನು ದೂರದ ಸಂಬಂದಿಕರೊಬ್ಬರು ಖಾಸಗಿ ಫೈನಾನ್ಸ್ ನಲ್ಲಿಟ್ಟು ಸಾಲ ಪಡೆದು ನಾಗರಾಜ್ ಬಳಿ ಜಾಮೀನು ಸಹಿ ಹಾಕಿಸಿಕೊಂಡಿದ್ದು ಇದೀಗ ನಾಗರಾಜ್ ಎಂಬುವರ ಮೇಲೆ ಸಾಲ ವಾಪಸ್ ನೀಡಲು ಕಿರುಕುಳ ನೀಡಿದ್ದು,

ಹಣ ಕಟ್ಟಲಾಗಲ್ಲ ಜೊತೆಗೆ ಕೊಲೆ ಬೆದರಿಕೆ ಹಾಗೂ ಅವಾಚ್ಯ ಶಬ್ದಗಳಿಂದ ಬೈದ ಹಿನ್ನಲೆ ಈ ಹಿನ್ನಲೆ ಮಾನಸಿಕವಾಗಿ ನೊಂದಿದ್ದು ನಾಗರಾಜ್ ಇವರು ತಮ್ಮ ಜಮೀನಿನಲ್ಲಿ ವಿಷ ಕುಡಿದು ನೇಣಿಗೆ ಶರಣಾಗಿದ್ದಾರೆ.ಪ್ರಕರಣ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಜೊತೆಗೆ ಕಾಣದ ರಾಜಕೀಯ ಮುಖಂಡರು ಪ್ರಕರಣ ವನ್ನು ಮೂಲೆ ಗುಂಪು ಮಾಡುವಲ್ಲಿ ಮುತುವರ್ಜಿ ವಹಿಸುತ್ತಿದ್ದು ಇದು ಒಳ್ಳೆಯ ಬೆಳವಣಿಗೆಯಲ್ಲ ಎಂಬುದು ಸ್ಥಳೀಯರ ಮಾತಾಗಿದೆ.

