- ಮುಗಿಲು ಮುಟ್ಟಿದ ಆತ್ಮೀಯರ ಸಂಭ್ರಮಾಚರಣೆ

ತೀರ್ಥಹಳ್ಳಿ : ತಾಲೂಕಿನ ಆಗುಂಬೆ ಹೋಬಳಿಯ ಹೊನ್ನೇತಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಚುನಾವಣೆ ದಿ 30 ರಂದು ನಡೆದಿದ್ದು, ಇದರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಿದ್ದ ಕೋಟೆಗುಡ್ಡೆ ಸುರೇಂದ್ರ ಅವಿರೋಧ ಆಯ್ಕೆಯಾಗಿದ್ದಾರೆ.ಈ ಅಧ್ಯಕ್ಷ ಸ್ಥಾನದ ಚುನಾವಣೆಯ ಪ್ರಕ್ರಿಯೆಯಲ್ಲಿ ಗೊತ್ತು ಪಡಿಸಿದ ಚುನಾವಣಾಧಿಕಾರಿ ಹಾಗೂ ಹಿರಿಯ ಸಹಾಯಕ ತೋಟಗಾರಿಕ ನಿರ್ದೇಶಕರು ತೀರ್ಥಹಳ್ಳಿ ಇವರು ನೂತನವಾಗಿ ಆಯ್ಕೆಯಾದ ಅಧ್ಯಕ್ಷರನ್ನು ಘೋಷಿಸಿದರು.ಈ ವೇಳೆ ಪಂಚಾಯತ್ ಅಭಿರುದ್ದಿ ಅಧಿಕಾರಿಗಳಾದ ಕೆ ಪಿ ವಿನಯ್ ಮಾಜಿ ಅಧ್ಯಕ್ಷರಾದ ಮಂಜುನಾಥ್ ಬಿಳಿಗೆರೆ,ಉಪಾಧ್ಯಕ್ಷರಾದ ಸುಮಿತ್ರ ಮಂಜಪ್ಪ, ಗೀತಾ ದಿನೇಶ್,ರಾಘವೇಂದ್ರ ಕುಂದಾದ್ರಿ, ರವೀಶ್ ಎಸ್, ನಂದನ್ ಹಸಿರುಮನೆ ಜೊತೆಗೆ ಊರಿನ ಹಿರಿಯರು ಗ್ರಾಮಸ್ಥರು ಇದ್ದರು.

