- ಮೇಗರವಳ್ಳಿ ಗ್ರಾಂ ಪಂ ಕೆ ಪಿ ರೋಡ್ ನಲ್ಲಿದೆ ಅಪಾಯಕಾರಿ ಬಾವಿ
- ಗ್ರಾಂ ಪಂ ಮೇಲೆ ಸ್ಥಳೀಯರ ಅಸಮಾಧಾನ

ಶಿವಮೊಗ್ಗ : ಹಣಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಣಿಗದ್ದೆ -ಅಲಸೆ ಹೋಗುವ ರಸ್ತೆ ಬಾರಿ ಮಳೆಗೆ ಕುಸಿತಗೊಂಡಿದ್ದು ರಸ್ತೆ ಸಂಚಾರ ಅಸ್ತವ್ಯ್ತಗೊಂಡಿದೆ. ಈ ಹಿಂದಿನ ವರ್ಷವೂ ಇದೇ ರೀತಿಯಾಗಿ ಕುಸಿತ ಕಂಡಿದ್ದು ರಸ್ತೆ ಕಾಮಗಾರಿ ಮಾಡಿ ನೀರಿನ ಪೈಪ್ ಗೆ ಕಾಲರ್ ಹಾಕದೆ ನೀರಿನ ಸವೆತಕ್ಕೆ ಕೊರೆದು ದುರಸ್ತಿಯಾಗಿದೆ. ಬಸ್ ಸಂಚಾರ ಕಡಿತಗೊಂಡಿದ್ದು, ಕಾರು ಚಾಲಕರು ತಮ್ಮ ಜೀವದ ಹಂಗು ತೊರೆದು ವಾಹನ ಚಲಾಯಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.ಸಂಬಂಧ ಪಟ್ಟ ಅಧಿಾರಿಗಳು,ಹಾಗೂ ಶಾಸಕರು ಮೌನ ವಹಿಸಿದ್ದಾರೆ ಎಂಬುದು ಗ್ರಾಮಸ್ಥರ ಹಾಗೂ ಪಾದಚಾರಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಮೇಗರವಳ್ಳಿ ಗ್ರಾಂ ಪಂ ಕೆ ಪಿ ರೋಡ್ ನಲ್ಲಿದೆ ಅಪಾಯಕಾರಿ ಬಾವಿ

ಮೇಗರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ ಪಿ ರಸ್ತೆ ಆಶ್ರಯ ಕಾಲೋನಿಯಲ್ಲಿ ಸು 15 ಕುಟುಂಬಕ್ಕೆ ಇರುವ ಸರ್ಕಾರಿ ಭಾವಿ ಸಂಪೂರ್ಣ ಶಿಥಿಲಾವಸ್ಥೆಗೊಂಡಿದ್ದು ಭಾವಿ ಮದ್ಯದಲ್ಲಿ ಜರಿದು ಕೂತಿದ್ದು ಅಪಾಯ ತರುವ ಎಲ್ಲಾ ಲಕ್ಷಣಗಳು ಇರುವಂತಹ ಸಂದರ್ಭ ಎದುರಾಗಿದೆ. ಕಳೆದ 4 ವರ್ಷದಲ್ಲಿ ಇದರ ಅವಸ್ಥೆ ಹೀಗೆ ಇದ್ದು ಗ್ರಾಮ ಪಂಚಾಯಿತಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.
