- ವಿಟೆಕ್ ಹಾಗೂ ಇಬ್ಬನಿ ಸಂಸ್ಥೆ ಮುಖ್ಯಸ್ಥರಾದ ವಿಶ್ವನಾಥರಿಗೆ ಶುಭ ಹಾರೈಕೆ

ಶಿವಮೊಗ್ಗ : ಜಿಲ್ಲೆಯ ಹೆಸರಾಂತ ಉದ್ಯಮಿ ವಿ -ಟೆಕ್ ಹಾಗೂ ಇಬ್ಬನಿ ಸಂಸ್ಥೆಯ ಮುಖ್ಯಸ್ಥರಾದ ಕುಂಟವಳ್ಳಿ ವಿಶ್ವನಾಥ್ ರವರಿಗೆ ಜೀವಮಾನದ ಸಾಧನೆಗಾಗಿ ಉದ್ಯೋಗ ರತ್ನ ಪ್ರಶಸ್ತಿಯನ್ನು ದಿ.08ರಂದು ಬೆಂಗಳೂರಿನಲ್ಲಿ ಮೀಡಿಯಾ ಹೌಸ್ ವತಿಯಿಂದ ಗೌರವಿಸಲಾಯಿತು.ಕರ್ನಾಟಕ ರಾಜ್ಯವಲ್ಲದೆ ಅಂತರ್ ರಾಜ್ಯ ಹಾಗೂ ಅಂತಾರಾಷ್ಟ್ರಿಯ ಮಟ್ಟದಲ್ಲಿ ವಿ ಟೆಕ್ ಯಂತ್ರೋಪಕರಣ ಮಾರಾಟ ಹಾಗೂ ಉತ್ತಮ ಸೇವೆಯನ್ನು ನೀಡಿದ್ದು ಜೊತೆಗೆ ರೈತರ ನೆಚ್ಚಿನ ಸಂಸ್ಥೆಯಾಗಿದೆ.ಸದಾ ಕ್ರಿಯಾಶೀಲ ವ್ಯಕ್ತಿತ್ವದ ವಿಶ್ವನಾಥ್ ಕುಂಟುವಳ್ಳಿಯವರು ಈ ಹಿಂದೆಯೂ ವಿವಿಧ ಪ್ರಶಸ್ತಿ ಪುರಸ್ಕಾರದ ಜೊತೆಗೆ ಸರ್ಕಾರಿ ಶಾಲೆ ಉಳಿವಿಗಾಗಿ ಹೋರಾಟ, ಸಾಮಾಜಿಕ ಕಳಕಳಿಯ ಜವಾಬ್ದಾರಿ ಹೊತ್ತವರು. ಕೋಟಿ ಒಡೆಯನಾದರೂ ತನ್ನ ಸರಳ ವ್ಯಕ್ತಿತ್ವದಿಂದಲೇ ಜನರ ಪ್ರೀತಿಯ ಸಂಪಾದಿಸಿದ್ದು ನಗು ಮೊಗದ ವಿಶ್ವನಾಥ್ ರಿಗೆ ಸಾರ್ವಜನಿಕರು ಹಾಗೂ ರೈತರು ಮೆಚ್ಚುಗೆ ಜೊತೆಗೆ ಶುಭ ಹಾರೈಸಿದ್ದಾರೆ.ಇನ್ನು ಸತ್ಯಶೋಧ ನ್ಯೂಸ್ ಮಾಧ್ಯಮದ ಮಾರ್ಗದರ್ಶಕರು ಹಾಗೂ ಜಾಹೀರಾತುದಾರರು ಆದ ಕುಂಟುವಳ್ಳಿ ವಿಶ್ವನಾಥ್ ರಿಗೆ ಸತ್ಯಶೋಧ ಮಾಧ್ಯಮ ಬಳಗ ಅಭಿನಂದನೆ ತಿಳಿಸಿದೆ.ಜೊತೆಗೆ ವಿ ಟೆಕ್ ಸಂಸ್ಥೆಯ ಆಡಳಿತ ಮಂಡಳಿ ಶುಭಾಶಯ ತಿಳಿಸಿದೆ.