Oplus_131072

ತೀರ್ಥಹಳ್ಳಿ : ತಾಲೂಕಿನ ಹೊನ್ನೇತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಂಗಾರಲ್ಲಿ 2024 – 2025 ಸಾಲಿನ ಕ್ಲಸ್ಟರ್ ಹಂತದ ಕಲಿಕಾ ಹಬ್ಬವನ್ನು ಏರ್ಪಡಿಸಲಾಗಿತ್ತು, ಕಲಿಕಾ ಹಬ್ಬದ ಉದ್ಘಾಟನೆಯನ್ನು ಹೊನ್ನೇತಾಳು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕೋಟೆಗುಡ್ಡೆ ಸುರೇಂದ್ರರವರು ನೆರವೇರಸಿದರು.

ಈ ಕಾರ್ಯಕ್ರಮದಲ್ಲಿ ಒಟ್ಟು 9 ಶಾಲೆಗಳು ಭಾಗವಹಿದ್ದವು, ಮಕ್ಕಳಿಗೆ ಜ್ಞಾಪನ ಶಕ್ತಿ ಚಟುವಟಿಕೆ, ರಸ ಪ್ರಶ್ನೆ,ಗಟ್ಟಿ ಓದು, ಕೈ ಬರಹ, ಕಥೆ ಹೇಳುವ ಚಟುವಟಿಕೆ, ಸಂತೋಷದಾಯಕ ಗಣಿತ ಹೀಗೆ ಹಲವಾರು ಚಟುವಟಿಗೆ ನೀಡಿ ಗೆದ್ದ ಮಕ್ಕಳಿಗೆ ಬಹುಮಾನ ನೀಡಿ ಪ್ರೋತ್ಸಾಹ ನೀಡಿದರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸುರೇಂದ್ರ ಕೋಟೆಗುಡ್ಡೆಯವರು ಶಾಲೆ ಹಾಗೂ ಅಚ್ಚುಕಟ್ಟು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ಇದೆ ಮಕ್ಕಳ ಕಲಿಕಾ ಕಾರ್ಯಕ್ರಮ ಮಕ್ಕಳ ಜೊತೆಗೆ ನಮಗೂ ಕಲಿಕಾ ಕಾರ್ಯಕ್ರಮ.

Oplus_131072

ಬಹುಮಾನ ಪಡೆವ ಮಕ್ಕಳಿಗೆ ಶುಭ ಹಾರೈಕೆ ತಿಳಿಸುವೆ.ಕಲಿಕೆಯಲ್ಲಿ ಒತ್ತಡ ಹಾಕುವ ಪೋಷಕರಿಗೆ ಕಿವಿಮಾತು ಮಕ್ಕಳ ಬಗ್ಗೆ ಎಚ್ಚರವಿರಲಿ ಎಂದರು ಗುರು ಹಿರಿಯರಿಗೆ, ತಂದೆ ತಾಯಿಗಳಿಗೆ, ಅನ್ನ ನೀಡೋ ರೈತರಿಗೆ, ಸೈನಿಕರಿಗೆ ಗೌರವ ನೀಡಿ ಮುಂದೆ ಈ ಶಾಲೆ ಉನ್ನತ ಮಟ್ಟದಲ್ಲಿ ನೋಡಲು ಇಷ್ಟ ಪಡುವೆ ಎಂದರು.ಈ ಸಂದರ್ಭದಲ್ಲಿ ಶಾಲೆಯ ಸ್ಮಾರ್ಟ್ ಕ್ಲಾಸ್ ಉದ್ಘಾಟನೆಯನ್ನು ವೇದಿಕೆಯಲ್ಲಿದ್ದ ಗಣ್ಯರು ಉದ್ಘಾಟನೆ ಮಾಡಿ ಮಕ್ಕಳ ಭವಿಷ್ಯಕ್ಕೆ ಶುಭ ಹಾರೈಸಿದರು.

Oplus_131072

ಶಾಲೆಯ ಕಾರ್ಯಕ್ರಮದಲ್ಲಿ ವಿಶೇಷ ಪಾತ್ರ ವಹಿಸಿದ ಮುಖ್ಯೋಪಾಧ್ಯಯರಾದ ಹನುಮಂತಪ್ಪ ಇವರ ಶ್ರಮಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸಿದರು. ಸದಾ ಈ ಶಾಲೆ ಹೀಗೆ ಮುಂದುವರೆಯಲು ಶಾಲೆಯ ಅಭಿವೃದ್ಧಿ ಬಗ್ಗೆ ಗಮನ ಹರಿಸಲು ಸಂಬಂಧ ಪಟ್ಟ ಸಚಿವರು,ಅಧಿಕಾರಿಗಳು ಗಮನ ಹರಿಸಿ ಶಾಲೆಯ ದುರಸ್ಥಿ ಹಾಗೂ ರಂಗಮಂದಿರದ ಮಂಜೂರು ಮಾಡಲು ಶಿಕ್ಷಕರ ಜೊತೆಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಕಾರ್ಯಕ್ರಮ ನಿರೂಪಣೆಯನ್ನು ಅರೇಹಳ್ಳಿ ಶಾಲೆಯ ಮುಖ್ಯೋಪಾಧ್ಯಯರಾದ ನಾಗರಾಜ್ ಅವರು ಬಹಳ ಅಚ್ಚುಕಟ್ಟಾಗಿ ನೆರವೇರಿಸಿ ಕೊಟ್ಟರು.

Oplus_131072

ಈ ಕಾರ್ಯಕ್ರಮದ ವೇದಿಕೆಯಲ್ಲಿ ಚಂಗಾರು ಶಾಲೆಯ ಅಧ್ಯಕ್ಷರಾದ ಸುಧಾಕರ್ ಹೆಚ್ ಎಸ್ ,ಪ್ರಾಥಮಿಕ ಶಾಲಾ ಶಿಕ್ಷಣ ಸಂಘದ ನಿರ್ದೇಶಕರುಗಳಾದ ಕೃಷ್ಣಮೂರ್ತಿ,ಜಯಂತಿ ನಾಗೇಶ್,ಗ್ರಾಮ ಪಂಚಾಯಿತಿ ಸದಸ್ಯರಾದ ರವೀಶ್ ಹೊಸಪೇಟೆ,ನಾಲೂರು ಸಮೂಹ ಸಂಪನ್ಮೂಲ ವ್ಯಕ್ತಿಯಾದ ಸಾದಿಕ್ ಅಹಮದ್,ನದಾಫ್ ,ಚಿಕ್ಕಳೂರುಶಾಲೆ ಯ ಮುಖ್ಯೋಪಾಧ್ಯಯರಾದ ಉಮೇಶ್, ಹಾಗೂ ಹಳೆಯ ವಿದ್ಯಾರ್ಥಿ ಸಂಘದ ರೂವಾರಿಗಳಾಗಿ ಶೋಭಾ ಹೊಸಕೋಪ್ಪ,ಹಾಗೂ ಸುಂದರೇಶ್ ಪ್ರಭಾರಿ ಮುಖ್ಯೋಪಾಧ್ಯಯರಾದ ಹನುಮಂತಪ್ಪ,ತೀರ್ಥಮುತ್ತೂರು ಗ್ರಾಂ ಪಂ ಸದಸ್ಯರಾದ ರೇಖಾ, ಶಿಕ್ಷಕಿಯಾದ ಲತಾ ಉಪಸ್ಥಿತರಿದ್ದರು.ನಾಲೂರು ಕ್ಲಸ್ಟರ್ ನ ಒಂಬತ್ತು ಶಾಲೆಯ ಶಿಕ್ಷಕರು ಶಿಕ್ಷಕಿಯರು,ಶಾಲೆಯ ಮಕ್ಕಳು,ಹಿರಿಯ ವಿದ್ಯಾರ್ಥಿಗಳು ಪೋಷಕರು ಗ್ರಾಮಸ್ಥರು ಇದ್ದರು.

Leave a Reply

Your email address will not be published. Required fields are marked *