• ಕರುಣಾಪುರ ಚಂದ್ರಶೇಖರ ಗುರೂಜಿಯವರ ಕೊಡುಗೆ
  • ಹಿರಿಯ ಆಟೋ ಚಾಲಕರಿಗೆ ಸನ್ಮಾನ

ತೀರ್ಥಹಳ್ಳಿ : ತಾಲೂಕಿನ ಮೇಗರವಳ್ಳಿ ಫಾರೆಸ್ಟ್ ಆಫೀಸ್ ಬಸ್ ನಿಲ್ದಾಣದಲ್ಲಿ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಆಟೋ ಸ್ಟಾಂಡ್ ಗೆ ಇದೀಗ ಕರುಣಾಪುರ ಚಂದ್ರಶೇಖರ ಗುರೂಜಿಯವರು ಕೊಡುಗೆ ನೀಡಿದ್ದು ಅವರೇ ಆಟೋ ಸ್ಟಾಂಡ್ ಉದ್ಘಾಟನೆ ಮಾಡಿ ಜೀವ ತುಂಬಿದರು.

ಇನ್ನು ಚಂದ್ರಶೇಖರ ಗುರೂಜಿಯವರಿಗೆ ಎಲ್ಲೆಡೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು ಜೊತೆಗೆ ಒಂದು ಒಂದು ಆಟೋ ಶುರುವಾಗಿ ಇದೀಗ 20 ಆಟೋಗಳಾಗಿ ಕೊರೋನಾದಂತಹ ಸಮಯದಲ್ಲೂ ನಿಸ್ವಾರ್ಥದಿಂದ ದುಡಿದ ಆಟೋ ಚಾಲಕರಾದ ನಂದೀಶ್ ಹೊಳೆ ಮದ್ಲು, ಮಹಮದ್ ಶಾ, ರಾಘವೇಂದ್ರ ಮುಂಡೊಳ್ಳಿ, ಅಕ್ಬರ್, ಬಶೀರ್ ಸಾಬ್ ರಿಗೆ ಸನ್ಮಾನ ಮಾಡಲಾಯಿತು. ಜೊತೆಗೆ ಆಟೋ ಸ್ಟಾಂಡ್ ನಿರ್ಮಾಣಕ್ಕೆ ಧನ ಸಹಾಯ ಮಾಡಿದ ಚಂದ್ರಶೇಖರ ಗುರೂಜಿಯವರಿಗೆ ಎಲ್ಲಾ ಆಟೋ ಚಾಲಕರು ಹಾಗೂ ಮಾಲೀಕರ ಪರವಾಗಿ ಸನ್ಮಾನ ಮಾಡಲಾಯಿತು.

ಇನ್ನು ಸರ್ಕಾರಕ್ಕೆ ಪಟೇಲ್ ವೆಂಕಟೇಶ್ ಹೆಗಡೆ ಸರ್ಕಾರದವರು ಹೋಬಳಿ ಮಟ್ಟದಲ್ಲಿ ಆಟೋದವರಿಗೆ ಪರ್ಮಿಟ್ ಮಾಡಿಕೊಡಲು ಎಲ್ಲಾ ಆಟೋ ಚಾಲಕರ ಪರವಾಗಿ ಮನವಿ ಮನವಿ ಮಾಡಿದರು.

ಈ ವೇಳೆ ಕಾರ್ಯಕ್ರಮದಲ್ಲಿ ನಂದೀಶ್ ಹೊಳೆಮದ್ಲು, ಮಹಮದ್ ಶಾ, ರಾಘವೇಂದ್ರ ಮುಂಡೊಳ್ಳಿ, ಅಕ್ಬರ್, ಬಶೀರ್ ಸಾಬ್, ಸುರೇಶ್ ಶೆಟ್ರು, ಪ್ರವೀಣ್, ಅಜಿತ್ ಅಣ್ಣುವಳ್ಳಿ ಹಾಗೂ ಸಾರ್ವಜನಿಕರು ಇದ್ದರು. ಪಟೇಲ್ ವೆಂಕಟೇಶ್ ಹೆಗಡೆ ಕಾರ್ಯಕ್ರಮವನ್ನು ನಿರೂಪಿಸಿದರು.

Leave a Reply

Your email address will not be published. Required fields are marked *