Oplus_131072

“ಸೇವಂತಿಗೆ”ನನ್ನ ಪ್ರೀತಿಯ ಸಹೋದರಿ ಶ್ರೀಲತಾ ಭಾರ್ಗವ್ ರವರ ಚೊಚ್ಚಲ ಕವನ ಸಂಕಲನ..ಈ ಕವನ ಸಂಕಲನ ಅಕ್ಟೋಬರ್ 20ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಯುಗಾದಿ” ಸ್ನೇಹ ಪರ್ವ” ಕಾರ್ಯಕ್ರಮದಲ್ಲಿ ಅದ್ದೂರಿಯಿಂದ ಬಿಡುಗಡೆಗೊಂಡಿದೆ. ಮೊದಲಿಗೆ ಈ ಕೃತಿಯ ಲೇಖಕಿಯಾದ ಶ್ರೀಲತಾ ಅಕ್ಕನವರಿಗೆ ನನ್ನ ಮನಪೂರ್ವಕವಾದ ಅಭಿನಂದನೆಗಳು.ಈಕೆ ವೃತ್ತಿಯಲ್ಲಿ ಶಿಕ್ಷಕಿ.ಜೊತೆಗೆ ಕವಯಿತ್ರಿ, ನಿರೂಪಕಿ,ನೃತ್ಯ ಹೀಗೆ ಹಲವಾರು ಕಲೆಗಳನ್ನು ಕರಗತ ಮಾಡಿಕೊಂಡ ಬಹುಮುಖ ಪ್ರತಿಭೆಯಿವರು.

ಹಿರಿಯ ಕವಿ ಸಹೃದಯಿ ಹಾಗೂ ನನಗೆ ಬಹಳ ಆತ್ಮೀಯರೆ ಆದ ಶ್ರೀಯುತ ಪದ್ಮನಾಭ.ಡಿ ಸರ್ ರವರ ಮುನ್ನುಡಿ ಹಾಗೂ ನನ್ನ ಪ್ರೀತಿಯ ಅಣ್ಣ ಶ್ರೀ ಶ್ರೀನಾಗ್ ಪಿ.ಎಸ್ ರವರ ಚಂದದ ಸಾಲುಗಳು ಬೆನ್ನುಡಿಯಾಗಿ ಈ ಪುಸ್ತಕವನ್ನು ಆವರಿಸಿದೆ.ಹಾಗೆಯೇ ಹಲವಾರು ಕವಿಗಳ ಶುಭಹಾರೈಕೆಯಿದೆ.”ಹಲವು ಪಕಳೆಗಳು ಸೇರಿ ಒಂದು ಸೇವಂತಿಗೆಹಲವು ಕವನಗಳು ಸೇರಿ ಒಂದು ಹೊತ್ತಿಗೆ”ವಾವ್ …ಈಗಿನ ಟ್ರೆಂಡ್ ಪ್ರಕಾರ ಹೇಳೋದಾದರೆ ತುಂಬಾ ಕ್ಯಾಚಿ ಲೈನ್.ಶೀರ್ಷಿಕೆಗೆ ಹೋಲುವ ಹಾಗೂ ಇಡೀ ಪುಸ್ತಕದ ಸಾರವನ್ನು ಹಿಡಿದಿಟ್ಟುಕೊಂಡಿರುವ ಸಾಲುಗಳು..ಸೇವಂತಿಗೆ ಸುಮಾರು ಎಪ್ಪತ್ತು ಕವನಗಳ ಹೊತ್ತಿಗೆ.ಇಡಗುಂಜಿ ಗಣಪನ ಸ್ಮರಣೆಯೊಂದಿಗೆ ಶುರು ಮಾಡಿ ,ಮನಸ್ಸು ಬದುಕು ,ಭಾಷೆ,ವ್ಯಕ್ತಿ ,ವ್ಯಕ್ತಿತ್ವ ಮೊದಲಾದ ವಿಚಾರಗಳನ್ನು ಒಳಗೊಂಡಿವೆ.ಬಹಳಷ್ಟು ಕವನಗಳು ನಿಸರ್ಗಕ್ಕೆ ನೆಲ ಜಲ ಹಾಗೂ ಸಂಬಂಧಪಟ್ಟವುಗಳಾಗಿವೆ.ಇನ್ನೂ ಕವನಗಳ ಬಗ್ಗೆ ಹೇಳೋದಾದರೆ ಇವರ ಕವನಗಳು ಬಹಳ ಅರ್ಥಪೂರ್ಣವಾಗಿ ಕ್ರಮಬದ್ದವಾಗಿವೆ. ಹಾಗಯೇ ಹಲವು ಸುಂದರ ವಿಚಾರಗಳನ್ನು ಒಳಗೊಂಡ ಸರಳ ಸುಂದರ ಸಾಲುಗಳು ಒಮ್ಮೆ ಓದಿದರೆ ಮನದಾಳದಲ್ಲಿ ಹಾಗೆಯೇ ಉಳಿಯುತ್ತದೆ.ಒಬ್ಬ ಬರಹಗಾರ ಬರೆಯುವಾಗ ಅವನು ಯಾವ ದೃಷ್ಟಿಕೋನದಿಂದ ವಿಚಾರಗಳನ್ನು ವಿವರಿಸುತ್ತಾನೆ ಎಂಬುದು ಬಹಳ ಮುಖ್ಯ.ಶ್ರೀಲತಾ ಅಕ್ಕನ ಕವನಗಳ ಸಾರ ಬಹಳ ಧನಾತ್ಮಕವಾದ ಯೋಚನೆಗಳನ್ನು ವಿವರಿಸುತ್ತದೆ.ಸಾಮಾನ್ಯವಾಗಿ ಮನುಷ್ಯ ಒಳ್ಳೆಯ ವಿಷಯಗಳಿಂದ ಕೆಟ್ಟ ವಿಚಾರಗಳಿಗೆ ಬಹಳ ಬೇಗ ಆಕರ್ಷಿತನಾಗುತ್ತಾನೆ.ಆದರೆ ಯಾರು ಕೆಡುಕಲ್ಲೂ ಒಳ್ಳೆಯ ವಿಚಾರಗಳನ್ನ ಹುಡುಕಿ ಅದನ್ನು ಬದುಕಿಗೆ ಆರಿಸಿಕೊಳ್ಳುವರೋ ಅವರು ಸಂಸ್ಕಾರಿಗಳಾಗುತ್ತಾರೆ.ಈ ತರ ಒಬ್ಬ ವ್ಯಕ್ತಿಯು ಇರಬೇಕೆಂದರೆ ಅವರಿಗೆ ಪ್ರತಿ ವಿಚಾರಗಳ ಆಳ ಅರಿಯುವ ತಾಳ್ಮೆ ಬಹಳ ಮುಖ್ಯ.ಈ ವೇಗದ ಪ್ರಪಂಚದಲ್ಲಿ ಬರಿ ಅಸಹನೆ ಕೋಪ,ಮತ್ಸರದಿಂದ ಮೆರೆಯುವವರ ನಡುವೆ ಇಂತಹ ಒಂದು ವ್ಯಕ್ತಿತ್ವ ನೋಡೋದಕ್ಕೆ ಬಹಳ ಖುಷಿಯಾಗುತ್ತದೆ.ಹಾಗೆಯೇ ಅವರ ಸುಸಂಸ್ಕೃತ ವ್ಯಕ್ತಿತ್ವದ ಸಾರ ಅವರ ಕವನಗಳಲ್ಲೂ ನಾವು ನೋಡಬಹುದು.ಇರುವೆಯ ದಾರಿ ಎಂಬ ಕವನದಲ್ಲಿ

ಇರುವೆಯ ಬದುಕಿನ ಸಾರವನ್ನು ಅಳೆದು ತೂಗಿ ಈ ಕವನದಲ್ಲಿ ವಿವರಿಸಿದ್ದಾರೆ.ಈ ಕವನದ ಇನ್ನುಳಿದ ಸಾಲುಗಳು ಬಹಳ ಸುಂದರವಾಗಿದೆ.ಇನ್ನೂಂದು ಕವನ ಹತ್ತಿಯ ಚರಿತ್ರೆಯು ಬಹಳ ಸೊಗಸಾಗಿದೆ.ನೇಕಾರ ಜೋಡಿಸಿದ ನೂಲುಚಂದದಿ ಕುಣಿಯಿತು ಮಗ್ಗದ ಕೋಲುಹತ್ತಿ ತಂದಿತು ಹರ್ಷದ ಹೊನಲುಕೇವಲ ಮೂರೆ ಸಾಲುಗಳಲ್ಲಿ ನೂಲು ಬಟ್ಟೆಯಾಗೋದನ್ನು ಸರಳವಾಗಿ ಚಂದವಾಗಿ ವಿವರಿಸಿದ್ದಾರೆ.

ಹಾಲು ಒಡೆದು ಹೋದಾಗ ಅದನ್ನು ಕಸಕ್ಕೆ ಸುರಿಯುವ ಬದಲು ಅದರಲ್ಲೂ ವಿವಿಧ ರುಚಿಯಾದ ತಿನಿಸುಗಳನ್ನು ಮಾಡಿ ಬಡಿಬಹುದು.ಇದು ಹಾಲಿನ ವಿಶೇಷತೆ.ಹಾಗೆ ನಾವು ಬದುಕಬೇಕು ಎಂಬುದನ್ನು ಕವನದ ಮೂಲಕ ಬಹಳ ಸುಂದರವಾಗಿ ವಿವರಿಸಿದ್ದಾರೆ.ಇನ್ನೂ ನಿಸರ್ಗದ ಬಗೆಗಿನ ಸಾಲುಗಳು ಬಹಳ ರಸವತ್ತಾಗಿದೆ.ಹೀಗೆ ಹೇಳುತ್ತಾ ಹೋದರೆ ಎಪ್ಪತ್ತು ಕವನಗಳ ಎಲ್ಲ ಸಾಲುಗಳು ಬಹಳ ಸುಂದರವಾಗಿವೆ.ಇದು ಅವರ ಚೊಚ್ಚಲ ಕವನ ಸಂಕಲನ. ಹಾಗಂತ ಎಲ್ಲೂ ಸುಳಿವು ನೀಡದಷ್ಟು ಅಚ್ಚುಕಟ್ಟಾಗಿ ತಮ್ಮ ಬರಹಗಳನ್ನು ಮಾಗಿಸಿ ಈ ಕವನ ಸಂಕಲನವನ್ನು ಸಿದ್ದಪಡಿಸಿದ್ದಾರೆ ಕವಯಿತ್ರಿಯವರು.ಕವಯಿತ್ರಿ ಹಾಗೂ ಇವರ ಕವನಗಳು ಇಬ್ಬರೂ ನನಗೆ ಬಹಳ ಆತ್ಮೀಯರು.ಹಾಗಂತ ಈ ಪುಸ್ತಕವನ್ನು ನಾನು ಅತಿಶಯವಾಗಿ ವರ್ಣಿಸಿಲ್ಲ.ಈ ಪುಸ್ತಕ ಬಹಳ ಸುಂದರ ಹಾಗೂ ಅರ್ಥಪೂರ್ಣವಾದ ಕವನಗಳ ಸಂಕಲನ. ಹಾಗಾಗಿ ಈ ಕವನ ಸಂಕಲನವನ್ನು ಕೊಂಡುಕೊಂಡು ಓದಿ ಎಂದು ನಿಮ್ಮೊಡನೆ ವಿನಂತಿಸಿಕೊಳ್ಳಲು ನನಗ್ಯಾವ ಸಂಕೋಚವೂ ಇಲ್ಲ.ಅಕ್ಷರಗಳ ರೂಪದಲ್ಲಿ ಘಮಿಸುವ ಸೇವಂತಿಗೆಯನ್ನು ಹರಸಿ ಹಾರೈಸಿ ಗೆಲ್ಲಿಸಿ ಎಂದು ಕೇಳಿಕೊಂಡು ಮನದಾಳದಿಂದ ಶುಭ ಹಾರೈಸುವ

ಪ್ರಶ್ನಾ ನಾರಾಯಣ ರೈ (ಉದಯೋನ್ಮಖ ಕವಯತ್ರಿ )

ಪುಸ್ತಕ ಸಂಪರ್ಕ: ಶ್ರೀಮತಿ ಶ್ರೀಲತಾ ಭಾರ್ಗವ್

Oplus_131072
Oplus_131072
Oplus_0

Leave a Reply

Your email address will not be published. Required fields are marked *