

ಶಿವಮೊಗ್ಗ:ದಿ. 16ರಂದು ನಡೆದ ಮನೀಷ್ ಪಾಂಡೆ ನೇತೃತ್ವದ ಮೈಸೂರು ವಾರಿಯರ್ಸ್ ವಿರುದ್ದ ಮೂರು ಓವರ್ ಮಾಡಿದ ಮಲೆನಾಡಿನ ಯುವಕ ನಿತಿನ್ ಶಾಂತವೇರಿ 17 ರನ್ ನೀಡಿ 3 ವಿಕೆಟ್ ಪಡೆದು ತಂಡ ಗೆಲ್ಲಲು ಕಾರಣರಾಗಿದ್ದು,ಜೊತೆಗೆ ಪ್ಲೇಯರ್ ಆಫ್ ದಿ ಅವಾರ್ಡ್ ಕೂಡ ಪಡೆದು ಶಿವಮೊಗ್ಗ ಕ್ಕೆ ಕೀರ್ತಿ ತಂದಿದ್ದಾರೆ. ಪ್ರಸ್ತುತ ನಾಲ್ಜು ಪಂದ್ಯಗಳನ್ನಾಡಿರುವ ಪಡಿಕಲ್ ನೇತ್ರತ್ವದ ಹುಬ್ಬಳ್ಳಿ ಟೈಗರ್ಸ್ ಮೂರು ಪಂದ್ಯ ಗೆಲ್ಲುವ ಮೂಲಕ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ.ಇದೇ ವೇಳೆ ಮಲೆನಾಡಿನ ನಿತಿನ್ ಶಾಂತವೇರಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.ಜೊತೆಗೆ ಯಡೂರು ಮೆಡಿಕಲ್ ನ ಮಾಲೀಕರಾದ ಪ್ರೇಮ್ ಯಡೂರ್ ಶುಭಾಶಯ ತಿಳಿಸಿದ್ದಾರೆ.


