ಮಲೆನಾಡು ಕಲೆಯ ತವರೂರು ಇಲ್ಲಿ ಸಾಹಿತ್ಯ, ಸಂಗೀತ,ಸಿನಿಮಾ, ವೈದ್ಯಕೀಯ, ರಾಜಕೀಯ, ಕ್ರೀಡೆ ಹೀಗೆ ಹಲವಾರು ಕ್ಷೇತ್ರದಲ್ಲಿ ಮಲೆನಾಡಿನ ಗಣ್ಯರ ಸಾಧನೆ ಶ್ಲಾಘನೀಯ.

ಇನ್ನು ಹಬ್ಬಗಳು ಬಂದಾಗ ಆದರ ಆಚರಣೆ ಮನೆ ಮನೆಗಳಲ್ಲೂ ಸಂಭ್ರಮ ಮನೆ ಮಾತಾಗಿದೆ.ಇನ್ನು ದೀಪಾವಳಿ ಹಬ್ಬದಲ್ಲಿ ಮಲೆನಾಡಿನಲ್ಲಿ ವಿಶೇಷ ಹಾಗೂ ವಿಭಿನ್ನವಾಗಿ ಆಚರಣೆ ಮಾಡುತ್ತಾರೆ. ಈ ಹಬ್ಬದಲ್ಲಿ ಮಲೆನಾಡ ಜಾನಪದ ಕಲೆ ಅಂಟಿಕೆ ಪೆಂಟಿಕೆ ಹಾಡು ಒಂದು.
ಹಿನ್ನಲೆ
ದೇವಸ್ಥಾನ ಅಥವಾ ಸಂಘ ಸಂಸ್ಥೆಗಳು ಒಗ್ಗಟ್ಟಿನಲ್ಲಿ ಮಾತಾಡಿ ಒಂದು ನಿರ್ದಿಷ್ಟ ದೇವಸ್ಥಾನದ ಜೀರ್ಣೋದ್ದಾರ ಮಾಡಲೆಂದು ರಾತ್ರಿ ದೇವಸ್ಥಾನದಲ್ಲಿ ಜ್ಯೋತಿ ಹತ್ತಿಸಿ ಊರು ಕೇರಿಗಳಲ್ಲಿ ತಿರುಗಾಟ ನಡೆಸುತ್ತಾರೆ. ಇ ವೇಳೆ ಎದುರು ಬದುರು ಎರೆಡು ಜ್ಯೋತಿ ಸಿಗಬಾರದು ಎಂಬ ಮಾತಿದೆ. ಇನ್ನು ಬೆಳಿಗ್ಗೆ ಹೊತ್ತಿಗೆ ಒಂದು ಮನೆಗೆ ಜ್ಯೋತಿ ನೀಡುತ್ತಾರೆ. ಮತ್ತೆ ಸಂಜೆ ಅದರ ಪಕ್ಕದ ಮನೆಯಿಂದ ಶುರುಮಾಡುತ್ತಾರೆ. ಒಂದು ವೇಳೆ ಮನೆ ಸಿಗದಿದ್ದರೆ ಹಲಸಿನ ಮರದಡಿ ಜ್ಯೋತಿ ಕೆಡಿಸಬೇಕು ಎಂಬುದು ಸಂಪ್ರದಾಯವಾಗಿದೆ.

ಸಂಪೂರ್ಣ ಹಾಡು 𝗟𝗜𝗡𝗞 ನಲ್ಲಿದೆ- ನಮ್ಮ ಮಲೆನಾಡು ನಮ್ಮ ಹೆಮ್ಮೆ- ಅಂಟಿಕೆ -ಪೆಂಟಿಕೆ ಹಿನ್ನಲೆ ಏನು?