ಶಿವಮೊಗ್ಗ : ಜಿಲ್ಲೆಯ ಸುತ್ತಮುತ್ತಲಿನ ಜನರ ಜೀವನಾಡಿಯಾಗಿದ್ದ ಸಹಕಾರ ಸಾರಿಗೆ ಬಸ್ ಏಕಏಕಿ ಸ್ಥಗಿತವಾಗಿ ಮಲೆನಾಡಿಗರಿಗೆ ನಿರಾಸೆಯಾಗಿದಂತೂ ಸತ್ಯ ಆದರೆ ಇದೀಗ ಹೊಸ ಹುಟ್ಟು ಪಡೆದು ಸಾರ್ವಜನಿಕರಿಗೆ ತನ್ನ ಸೇವೆ ನೀಡಲು ಶಿವಮೊಗ್ಗ ಹಾಗೂ ಚಿತ್ರದುರ್ಗಾ ದಲ್ಲಿ ಮತ್ತೆ ರೋಡಿಗಿಳಿದಿದ್ದು ಜನರ ಖುಷಿಗೆ ಕಾರಣವಾಗಿದೆ.

ಸಹಕಾರ ಸಾರಿಗೆ ಬಸ್ ನಿಂತ ಮೇಲೆ ಅದರಲ್ಲಿರೋ ನಿರ್ವಾಹಕರು,ಸಿಬ್ಬಂದಿಗಳು ಸಿಕ್ಕಿದಾಗೆಲ್ಲ ತಮ್ಮ ಜೀವನ ಮುಗಿದೋಯ್ತು ಎಂದು ಹೇಳಿದುಂಟು ಕೆಲವರು ಬೇರೆ ಬೇರೆ ಬಸ್ ನಲ್ಲಿ ಕೆಲಸದ ಸಲುವಾಗಿ ತಮ್ಮ ಕುಟುಂಬದವರನ್ನು ಒಂದೆಡೆ ಬಿಟ್ಟು ಬೇರೆ ಕಡೆ ಇದ್ದು ಬೇರೆ ಬೇರೆ ಕೆಲಸ ಮಾಡಿದ್ದು ಸತ್ಯಶೋಧ ಮಾಧ್ಯಮ ಗಮನಿಸಿದೆ. ಈ ಬಗ್ಗೆ ಒಂದೆರೆಡು ಸರಿ ವರದಿ ಕೂಡ ಮಾಡಿತ್ತು.ಇನ್ನು ಸಹಕಾರ ಸಾರಿಗೆ ಓಡಾಡತ್ತೆ ಅನ್ನೋ ಸುದ್ದಿ ಹಾಗೂ ವಿಡಿಯೋ ಹರಿದಾಡುವ ಬೆನ್ನಲ್ಲೇ ಯಾವ ಸಂಸ್ಥೆ ಇದರ ಮಾಲೀಕತ್ವ ವಹಿಸಿದೆ ಹಾಗೂ ಇದರ ಮುಂದಿನ ನಿಲುವೇನು ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.










