
ಮಲೆನಾಡು : ಮಲೆನಾಡು ಹೆಚ್ಚುಕಮ್ಮಿ ಮಳೆಯಿಲ್ಲದೇ ಹಳ್ಳ,ನದಿ,ತೊರೆಗಳು ಬತ್ತಿ ಹೋಗಿ ಕುಡಿಯಲು ನೀರಿಲ್ಲದೆ ಪ್ರಾಣಿ ಪಕ್ಷಿಗಳು ಕೂಡ ಬಿಸಿಲ ಜಳಕ್ಕೆ ತುತ್ತಾಗಿದ್ದು ಇದೀಗ ಮಲೆನಾಡಿಗೆ ಮಳೆರಾಯನ ಆಗಮನ ರೈತರಿಗೂ ಹೊಸ ಹುಮ್ಮಸ್ಸು ತಂದಿದ್ದು ಯುಗಾದಿ ನಂತರ ಮಳೆಯಾಗಲಿದೆ ಎಂಬ ನಂಬಿಕೆ ನಿಜವಾಗಿದೆ.
ಇನ್ನು ಏಪ್ರಿಲ್ 18ರವರೆಗೆ ಕರ್ನಾಟಕದ 25ಕ್ಕೂ ಹೆಚ್ಚಿನ ಜಿಲ್ಲೆಗಳಲ್ಲಿ ಮಳೆ ಆಗಲಿದೆ ಎಂದು ಭಾರತೀಯ ಹವಮಾನ ಇಲಾಖೆ ಮಾಹಿತಿ ನೀಡಿದೆ.ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾಸನ, , ಕೊಡಗು, ಮೈಸೂರು, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ.


