• ಭಾರತದ ಲೆಜೆಂಡ್ ಆಟಗಾರ ಕಪಿಲ್ ದೇವ್ ದಾಖಲೆ ಉಡೀಸ್-𝗪𝗘 𝗟𝗢𝗩𝗘 𝗨 𝗠𝗔𝗫𝗶𝗶𝗶

𝗦𝗔𝗧𝗛𝗬𝗔𝗦𝗛𝗢𝗗𝗛𝗔 – 𝗡𝗘𝗪𝗦 ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಸುನಾಮಿ ಎಬ್ಬಿಸಿದ ಆಸೀಸ್ ಆಲ್​ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಸಿಡಿಲಬ್ಬರದ ದ್ವಿಶತಕ ಸಿಡಿಸಿದಲ್ಲದೆ ಏಕಾಂಗಿಯಾಗಿ ತಂಡವನ್ನು ಗೆಲುವಿನ ದಡ ಸೇರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅಫ್ಘಾನಿಸ್ತಾನ ನೀಡಿದ 292 ರನ್‌ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಕೇವಲ 49 ರನ್‌ಗಳಿಗೆ ತನ್ನ ಐದು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಆ ನಂತರ ಜವಾಬ್ದಾರಿಯುತವಾಗಿ ಬ್ಯಾಟ್ ಬೀಸಿದ ಮ್ಯಾಕ್ಸ್‌ವೆಲ್, ದ್ವಿಶತಕ ಸಿಡಿಸಿ ಆಸ್ಟ್ರೇಲಿಯಾಕ್ಕೆ ಮೂರು ವಿಕೆಟ್‌ಗಳ ಜಯ ನೀಡಿದರು. ಈ ಸ್ಫೋಟಕ ದ್ವಿಶತಕದಲ್ಲಿ ಅವರು ಪ್ಯಾಟ್ ಕಮಿನ್ಸ್ ಅವರೊಂದಿಗೆ 202 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು ಅದರಲ್ಲಿ 179 ರನ್‌ಗಳು ಮ್ಯಾಕ್ಸ್‌ವೆಲ್‌ ಬ್ಯಾಟ್​ನಿಂದ ಬಂದವು. ಮ್ಯಾಕ್ಸ್‌ವೆಲ್ 128 ಎಸೆತಗಳನ್ನು ಎದುರಿಸಿ 21 ಬೌಂಡರಿ ಮತ್ತು 10 ಸಿಕ್ಸರ್‌ಗಳೊಂದಿಗೆ 201 ರನ್‌ಗಳ ಅಜೇಯ ಇನ್ನಿಂಗ್ಸ್‌ ಆಡಿದರು. ಈ ಐತಿಹಾಸಿಕ ದ್ವಿಶತಕದೊಂದಿಗೆ ಮ್ಯಾಕ್ಸ್‌ವೆಲ್, ಭಾರತದ ಲೆಜೆಂಡ್ ಆಟಗಾರ ಕಪಿಲ್ ದೇವ್ ಅವರ ದಾಖಲೆಯನ್ನೂ ಮುರಿದರು ಎಂಬುದು ಕ್ರೀಡಾಭಿಮಾನಿಗಳಲ್ಲಿ ಅಚ್ಚರಿ.

Leave a Reply

Your email address will not be published. Required fields are marked *