
ತೀರ್ಥಹಳ್ಳಿ: ಪಟ್ಟಣ ಪಂಚಾಯ್ತಿ ಹಾಲಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುವ ವಿಷಯಕ್ಕೆ ಸಂಬಂಧಿಸಿದಂತೆ ಅಧ್ಯಕ್ಷರಾದ ರಹಮ ತ್ ಉಲ್ಲಾ ಅಸಾದಿ ವಿರುದ್ಧ ಪಟ್ಟಣ ಪಂಚಾಯತಿಯ ಆರು ಮಂದಿ ಸದಸ್ಯರು ವಿಶ್ವಾಸ ಇಲ್ಲದೇ ಇರುವ ಕಾರಣ ಅಸಾದಿ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸುತ್ತಿದ್ದೇವೆ.

ಈ ಗೊತ್ತುವಳಿಯ ತೀರ್ಮಾನಕ್ಕಾಗಿ ನಿಯಮಾನುಸಾರ ಮುಂದಿನ ಕ್ರಮ ತೆಗೆದುಕೊಳ್ಳಬೇಕೆಂದು ಪಟ್ಟಣ ಪಂಚಾಯತ್ ನ ಮುಖ್ಯಾಧಿಕಾರಿಗಳಿಗೆ ಸಹಿ ಮಾಡಿರುವ ಪತ್ರ ರವಾನಿಸಿದ್ದಾರೆ.

ಹಾಗಾದ್ರೆ ಮುಂದೆ ಏನಾಗುತ್ತೆ..!?
ಪಟ್ಟಣ ಪಂಚಾಯತ್ ನಲ್ಲಿ ಒಟ್ಟು 15 ಸದಸ್ಯರು ಇದ್ದು ಅದರ ಜೊತೆ ಶಾಸಕರು ಹಾಗೂ ಸಂಸದರು ಸೇರಿ 17 ಮಂದಿ ಆಗಲಿದ್ದಾರೆ. ಇದರಲ್ಲಿ ಮೂರರ ಒಂದು ಭಾಗ ಎಂದರೆ ಆರು ಮಂದಿ ವಿರೋಧ ವ್ಯಕ್ತಪಡಿಸಿದರೆ ಅಧ್ಯಕ್ಷ ಸ್ಥಾನ ಕಳೆದುಕೊಳ್ಳಬೇಕು. ಆದರೆ ಕಾಂಗ್ರೆಸ್ 9 ಸದಸ್ಯರ ಪೈಕಿ ಅಧ್ಯಕ್ಷರು ಬಿಟ್ಟು ಇನ್ನಿಬ್ಬರು ಸಹಿ ಮಾಡಿಲ್ಲ. ಆ ಇಬ್ಬರ ಜೊತೆ ಒಂದು ವೇಳೆ ಬಿಜೆಪಿ ಸದಸ್ಯರು ಅಸಾದಿ ಅವರಿಗೆ ಬೆಂಬಲ ಕೊಟ್ಟಲ್ಲಿ ಅಸಾದಿ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.

ಎಲ್ಲರ ಜೊತೆಗೆ ಬಾಂಧವ್ಯದಿಂದ ಇರುವ ಅಸಾದಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ನಂತರ ಅಭಿವೃದ್ಧಿ ಜೊತೆಗೆ ಒಳ್ಳೊಳ್ಳೆ ಕೆಲಸ ಮಾಡಿದ್ದಾರೆ. ಹಾಗಾಗಿ ಅಧ್ಯಕ್ಷ ಸ್ಥಾನ ಉಳಿಯುವ ಸಾಧ್ಯತೆ ಹೆಚ್ಚಿದ್ದು ಪಕ್ಷ ಬದಲಾವಣೆ ಆಗುತ್ತಾ? ಎನ್ನುವ ಕುತೂಹಲ ಸಹ ಎಲ್ಲರಲ್ಲೂ ಇದೆ.

