ಮೈಸೂರು ಜಿಲ್ಲೆ ಟಿ.ನರಸಿಪುರ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಅಮಾನುಷ ವರ್ತನೆ ಮತ್ತೊಮ್ಮೆ ಬೆಳಕಿಗೆ ಬಂದಿದೆ. ಕೆಲವೇ ರೂಪಾಯಿಗಳ ಸಾಲ ತೀರಿಸದ ಕಾರಣ ಅದರಲ್ಲೂ ಕೇವಲ 1280 ರೂಪಾಯಿ ಲೋನ್ ಕಟ್ಟಿಲ್ಲ ಅಂತ 7 ವರ್ಷದ ಹೆಣ್ಣು ಮಗುವನ್ನು ಅಪಹರಿಸಿರುವುದು ಸಂಸ್ಥೆಗಳ ಸಿಬ್ಬಂದಿಯ ಕ್ರೂರತೆಯನ್ನು ತೋರಿಸಿದ್ದು, ಈ ಪ್ರಕರಣ ಈಗ ಬೆಳಕಿಗೆ ಬಂದಿದೆ.

ಕೇವಲ 1280 ರೂಪಾಯಿ ಲೋನ್ ಕಟ್ಟಿಲ್ಲ ಎಂದು 7 ವರ್ಷದ ಬಾಲಕಿಯನ್ನು ಸಿಬ್ಬಂದಿಗಳು ಕರೆದೊಯ್ದು ನಿಮ್ಮ ತಾಯಿ ಎಲ್ಲಿ ತೋರಿಸಿ ಎಂದು ಮಗುವಿಗೆ ಹಿಂಸೆ ನೀಡಿರುವ ಆರೋಪ ಕೇಳಿ ಬಂದಿದೆ.ಜಾಲಹಳ್ಳಿ ಗ್ರಾಮದ ನವೀನ್ ಹಾಗೂ ಪ್ರಮೀಳಾ ದಂಪತಿ ಜೀವನ ನಡೆಸಲು ಮೈಕ್ರೋ ಫೈನಾನ್ಸ್ ನಿಂದ 30 ಸಾವಿರ ಸಾಲ ಪಡೆದಿದ್ದರು.

ಈ ನಡುವೆ ದಂಪತಿ 13 ತಿಂಗಳು ಲೋನ್ ಕಟ್ಟಿದ್ದು ಈ ತಿಂಗಳು 4 ದಿನ ತಡವಾಗಿದ್ದಕ್ಕೆ ಸಿಬ್ಬಂದಿಗಳು ಮನೆಗೆ ಬಂದು ನವೀನ್ ತಾಯಿಗೆ ಬೈದು ಹಣ ಕಟ್ಟುವಂತೆ ಒತ್ತಾಯಿಸಿದ್ದಾರೆ. ಬಳಿಕ ಪಕ್ಕದ ಊರಿನಲ್ಲಿದ್ದ ಬಾಲಕಿಯ ಬಳಿ ತೆರಳಿ ನಿಮ್ಮ ಅಮ್ಮ ಎಲ್ಲಿ ತೋರಿಸಿ ಬಾ ಎಂದು ಫೈನಾನ್ಸ್ ಸಿಬ್ಬಂದಿಗಳು ಕರೆದೊಯ್ದಿದ್ದರು ಎನ್ನಲಾಗಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಲೇ ಕಠಿಣ ಕಾನೂನುಗಳನ್ನು ನಾವು ತಂದಿದ್ದೇವೆ. ಇಂದೇ ನಾನು ಮೈಸೂರು ಪೊಲೀಸ್ ಕಮಿಷನರ್ ಅಥವಾ ಐಜಿ ಯವರ ಜೊತೆ ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸುತ್ತೇನೆ. ಮಗು ಕರೆದೊಯ್ಯುವಂತಹ, ಅಪಹರಣ ಮಾಡುವಂತಹ ಕ್ರಿಯೆ ಖಂಡನೀಯ. ಇದನ್ನು ಮಾಡುವವರು ಕಠಿಣ ಹೃದಯಿಗಳು, ಮಾನವೀಯತೆ ಇಲ್ಲದವರು ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *