ಶಿವಮೊಗ್ಗ :ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸೆಪ್ಟೆಂಬರ್ 14ರಂದು ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಇದೇ ವೇಳೆ ಸ್ಥಳೀಯ ಕಾರ್ಯಕ್ರಮದಲ್ಲೂ ಭಾಗವಹಿಸಲಿದ್ದಾರೆ.

ಬೆಂಗಳೂರು ವಿಮಾನ ನಿಲ್ದಾಣದಿಂದ ಹೊರಟು ಬೆಳಗ್ಗೆ 10:45 ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣ ತಲುಪಲಿದ್ದಾರೆ. ಬೆಳಿಗ್ಗೆ 11:30 ಕ್ಕೆ ಸಾಗರ ರಸ್ತೆಯ ಪಿ ಇ ಎಸ್ ಟಿ ಕಾಲೇಜಿನ ಪ್ರೇರಣಾ ಸಾಂಭಾಗಣದಲ್ಲಿ ಇಂಜಿನಿಯರಿಂಗ್ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗವಹಿಸಿ

ನಂತರ 12 30ಕ್ಕೆ ಇ ಎಸ್ ಐ ಆಸ್ಪತ್ರೆ ಗೆ ಬೇಡಿ ನೀಡಲಿದ್ದಾರೆ. ಮದ್ಯಾಹ್ನ 1 ಗಂಟೆಗೆ ತೀರ್ಥಹಳ್ಳಿ ಗೆ ತೆರಳಿ ವಾಸ್ತವ್ಯ ಹೂಡಲಿದ್ದಾರೆ.

ಸೆ 15ರಂದು, ತೀರ್ಥಹಳ್ಳಿಯ ಚಕ್ಕೊಡಬೈಲಿನಿಂದ ಹೊರಟು ಬೆಳಗ್ಗೆ 11 ಕ್ಕೆ ಶಿವಮೊಗ್ಗ ತಲುಪಿ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣ ಮಾಡಲಿದ್ದಾರೆ.

Leave a Reply

Your email address will not be published. Required fields are marked *