ತೀರ್ಥಹಳ್ಳಿ : ದಿ 11 ರಂದು ಬಿಜೆಪಿ ಮೇಗರವಳ್ಳಿ ಮಹಾ ಶಕ್ತಿ ಕೇಂದ್ರದಿಂದ ಸೋಮವಾರದಂದು ತಾಲೂಕಿನ ಮೇಗರವಳ್ಳಿಯ ಆಗುಂಬೆ ಹೋಬಳಿ ವ್ಯಾಪ್ತಿಯಲ್ಲಿ ರೈತರು, ಕೂಲಿ ಕಾರ್ಮಿಕರ ಜೊತೆಗೆ ಚುನಾಯಿತ ಪ್ರತಿನಿಧಿಗಳನ್ನೂ ಬಿಡದೇ ಎಲ್ಲರ ಮೇಲೆ ಕೇಸುಗಳನ್ನು ದಾಖಲಿಸಿ , ನಿರಂತರವಾಗಿ ಕಿರುಕುಳ ನೀಡುತ್ತಿರುವ ಅರಣ್ಯ ಇಲಾಖೆಯ ದೌರ್ಜನ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು.ಈ ವೇಳೆ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ ನೇಣು ಹಾಕುವಾಗಲು ತಮ್ಮ ಕೊನೆಯಾಸೆ ಕೇಳ್ತಾರೆ ಆದ್ರೆ ಅರಣ್ಯ ಇಲಾಖೆಯವರು ನೇರ ಕುಣಿಕೆ ಎಳೆಯುವ ಕಾರ್ಯದಲ್ಲಿದ್ದದ್ದು ಬೇಸರ ತಂದಿದೆ ಎಂದರು.ಈ ವೇಳೆ ಆಗುಂಬೆ ಹೋಬಳಿಯ ಜನ ಪ್ರತಿನಿಧಿಗಳು, ರೈತರು, ಕಾರ್ಯಕರ್ತರು ಸ್ಥಳೀಯರು ಇದ್ದರು.










ದುಡ್ಡು ಇದ್ದವರಿಗೆ ದುಡ್ಡು ತೊಗೊಂಡು ಬಿಟ್ಟು ಬಿಡ್ತಾರೆ
ಅದೇ ಬಡವ ಏನಾದ್ರೂ ಮನೆ ಹತ್ರ ಜಾಗ ಮಾಡಿದ್ರೆ ಅದು ಪಾರಿಸ್ಟ್ ಜಾಗ ಅಂತ ಅವನ ಮೇಲೆ ಕೇಸ್ ಹಾಕ್ತಾರೆ ಉದಾಹರಣೆ ತುಂಬಾ ಇದಾವೆ.
ಕಾನೂನು ಎಲ್ಲರಿಗೂ ಒಂದೇ ಅದಕ್ಕೆ ನಾವು ತಲೆ ಬಾಗಲೆ ಬೇಕು ಅರಣ್ಯ ಒತ್ತುವರಿ ತಡೆಯುವುದು ಅರಣ್ಯ ಇಲಾಖೆಯ ಜವಾಬ್ದಾರಿ ಆಗಿರುತ್ತೆ …
ಆದ್ರೆ ನ್ಯಾಯ ಎಲ್ಲರಿಗೂ ಒಂದೇ ಇರಬೇಕು ಅನ್ನೋದು ನನ್ನಾ ಭಾವನೆ .
ಅರಣ್ಯ ಇಲಾಖೆ ಇಲ್ಲದೆ ಹೋದರೆ ನಮ್ಮ ಮಲೆನಾಡು ಭಾಗದಲ್ಲಿ ಕಡು ನಾಶ ಆಗೋದು ಕಂಡಿತಾ.
ಸತ್ಯದ ರೀತಿಯಲ್ಲಿ ಪ್ರತಿಯೊಬ್ಬರಿಗೂ ಒಂದೇ ಕಾನೂನು ತರಬೇಕು
ಕೆಲವರ ಬಳಿ ನಾನೇ ಕೇಳಿದರೆ ಪ್ರಕಾರ ಇಷ್ಟು ಜಾಗ ಮಾಡೋದಕ್ಕೆ ಇಷ್ಟು ದುಡ್ಡು ಕೊಟ್ಟಿದ್ದೇನೆ ಅನ್ನೋ ಮಾತು ಸರ್ವೇ ಸಾಮಾನ್ಯ ಇದು ನಮ್ಮ ಮೇಗರವಳ್ಳಿ ಅರಣ್ಯ ಇಲಾಖೆಗೆ ದೊಡ್ಡ ಮಟ್ಟದ ಕಪ್ಪು ಚುಕ್ಕೆ ಅನ್ನೋದು ನನ್ನ ಅಭಿಪ್ರಾಯ ….ಜೈ ಹಿಂದ್ ಜೈ ಕರ್ನಾಟಕ.
ಕಾಡನ್ನು ನಮ್ಮ ಮನೆ ಮಕ್ಕಳಂತೆ ಸಂರಕ್ಷಿಸಬೇಕು ಅದು ನಮ್ಮ ಕರ್ತವ್ಯ ……
ಪ್ರೀತಿಯಿಂದ ಪ್ರತಿಕ್ರಿಯೆ ನೀಡಿದ್ದೀರಿ ಧನ್ಯವಾದಗಳು ಸರ್ 💐🙏
ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ ಸರ್