- ಹದ ಮಳೆ ಹಾಗೂ ಬಿಸಿಲಿಗೆ ಏಳುತ್ತಿದೆ ಅಣಬೆ

ಮಲೆನಾಡು : ಮಲೆನಾಡಲ್ಲಿ ದಿನದಿಂದ ದಿನಕ್ಕೆ ಮಳೆ ಜೋರಾಗಿದ್ದು ಜೊತೆಗೆ ಬಿಸಿಲಿನ ತಾಪವು ಕೂಡ ಹೆಚ್ಚಿದೆ.ಈ ಹವಾಮಾನಕ್ಕೆ ತಕ್ಕಂತೆ ಭೂಮಿಯ ಒಡಲಿನಲ್ಲಿ ಮೊಗ್ಗಾಗಿ ಹುಟ್ಟಿ ಮೇಲೆ ಬರುತ್ತಿದ್ದಂತೆ ಅರಳಿ ಒಂದೇ ದಿನಕ್ಕೆ ಬಾಡಿ ಹೋಗುತ್ತವೆ , ಅಕ್ಕ ಪಕ್ಕದ ಕಾಡು ಹಾಗೂ ಹಡ್ಡೆ ಪ್ರದೇಶಗಳಲ್ಲಿ ಅಣಬೆಗಳು ಅರಳುವುದು ನೋಡುವುದೇ ಚಂದ ಎನ್ನುತ್ತಾರೆ ಮಲೆನಾಡಿಗರು. ಅಣಬೆ ಪಲ್ಯೆ ರುಚಿಯೇ ಬೇರೆ! ಅಣಬೆ ಪಲ್ಯೆ ಅಥವಾ ಸಾಂಬಾರು ಜೊತೆಗೆ ರೊಟ್ಟಿಯ ಕಂಬಿನೇಶನ್ ನ ರುಚಿ ಯಾವ ಮಾಂಸಹಾರ ಪಲ್ಯೆಗೂ ಸೆಡ್ಡು ಹೊಡೆಯುತ್ತದೆ. ಅದರ ರುಚಿಗೆ ಮಲೆನಾಡಿಗರಲ್ಲದೆ ಹೊರಗಿನವರು ಕೂಡ ಫಿದಾ ಆಗಿದಂತೂ ಸತ್ಯ.ಅಣಬೆ ಸಾಂಬಾರಿನ ಘಮಕ್ಕೇ ಕೆಲವರು ಅಭಿಮಾನಿ ಬಳಗವಿದೆ ಎಂದರು ತಪ್ಪಾಗಲಾರದು.

ವಿವಿಧ ಅಣಬೆ ಪ್ರಭೇದಗಳು ಮಳೆಯ ಶುರುವಿನಲ್ಲಿ ಹೈಗನ ಅಣಬೆ ,ಭೋಗಿ ಅಣಬೆ ,ಕಸರಕನ ಅಣಬೆ ,ಹೆಗ್ಗಲಳಬೆ,ಅಕ್ಕಿ ಅಣಬೆ,ಚುಳ್ ಅಣಬೆ (ಎಣ್ಣೆ ಅಣಬೆ), ಹೀಗೆ ಅನೇಕ ಅಣಬೆ ಪ್ರಭೇದಗಳು ಕಾಣ ಸಿಗುತ್ತದೆ.ವಿಷಕಾರಿ ಅಣಬೆಗಳ ಬಗ್ಗೆ ಇರಲಿ ಎಚ್ಚರ ತಿನ್ನುವ ಅಣಬೆಗಳು ಒಂದೆಡೆಯಾದರೆ ಇದೇ ವೇಳೆ ವಿಷಕಾರಿ ಅಣಬೆಗಳು ಕೂಡ ಕಾಣಸಿಗುವುದು ನಿಜವಾದರೂ ಅಂತಹ ಅಣಬೆಗಳ ಬಗ್ಗೆ ಜಾಗೃತವಾಗಿರಿ, ಒಂದು ವೇಳೆ ಅಣಬೆಗಳ ಬಗ್ಗೆ ನಿಮಗೆ ತಿಳಿದಿಲ್ಲವೆಂದರೆ ತಿಳಿದವರಲ್ಲಿ ಅಥವಾ ಹಿರಿಯರ ಬಳಿ ತಿಳಿದುಕೊಳ್ಳಿ ಯಾಕೆಂದರೆ ವಿಷಕಾರಿ ಅಣಬೆಗಳು ಕೆಲವೊಮ್ಮೆ ಮನುಷ್ಯನ ಜೀವ ತೆಗೆದ ಉದಾಹರಣೆ ಕೂಡ ಸಾಕಷ್ಟಿದೆ.


