- ಅಂಟಿಗೆ ಪೆಂಟಿಗೆ ಜ್ಯೋತಿ ಮೂಲಕ ಕಾರ್ಯಕ್ರಮ ಉದ್ಘಾಟನೆ
- ಸ್ಥಳೀಯ ಸಾಧಕರಿಗೆ ಸನ್ಮಾನ
- ಕ್ರೀಡಾಕೂಟದ ಫಲಿತಾಂಶ ಹೀಗಿದೆ

ಮಾರ್ಚ್ 21 ರಂದು ನಾಲೂರಿನ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಅತ್ಯಂತ ಯಶಸ್ವಿಯಾಗಿ ಶಿವಪ್ರಿಯ ಕಪ್ ತೆರೆ ಕಂಡಿತು. ರೋಹಿತ್ ಹೆಗ್ಡೆ ಹೊಸೂರು, ರೇಮಯ್ಯ, ಕಿರಣ್ ವಡದಕೊಡಿಗೆ ಇವರೊಂದಿಗೆ, ಮಹಾಬಲೇಶ್ ಬೆಳಚಿಕಟ್ಟೆ, ದೇವರಾಜ್ ಇಳಿಮನೆ, ಗಿರೀಶ್ ಇಳಿಮನೆ, ಪ್ರಜ್ವಲ್ ಕಾರಬೈಲ್, ನಯನ ಮಳುವಾಡಿ, ನಿತಿನ್ ಶೆಟ್ಟಿ ನಾಲೂರು, ಅಶೋಕ ನಾಲೂರು, ರೇವಂತ್ ಹೆಗ್ಡೆ, ನೌಹುಷ್ ಹೆಗ್ಡೆ, ಅರುಣ್, ದೀಕ್ಷಿತ್, ಸಂದರ್ಶ, ದೀಪಕ್, ಸುಬ್ಬು, ರಾಜೇಶ, ಕಾರ್ತಿಕ್, ಕೌಶಿಕ್, ದರ್ಶನ, ರಾಘು, ಕಾರ್ತಿಕ್, ನಿಖಿಲ್ ಶೆಟ್ಟಿ ಹಾಗೂ ಶಿವಪ್ರಿಯ ಪ್ರೆಂಡ್ಸ್ ನ ಎಲ್ಲಾ ಸದಸ್ಯರು, ಮಲ್ಲಿಕಾರ್ಜುನ ಸೇವಾ ಸಮಿತಿಯ ಸದಸ್ಯರು, ಗ್ರಾಮಸ್ಥರು, ಹಾಗೂ ಇನ್ನಿತರ ಸ್ನೇಹ ಬಳಗದ ಸಹಕಾರ ದಲ್ಲಿ ಅಂಟಿಗೆ ಪೆಂಟಿಕೆ ಜ್ಯೋತಿ ಮೂಲಕ, ವೇದಿಕೆ ಬಂದು..ಅಂಟಿಗೆ ಪಂಟಿಗೆ ಜ್ಯೋತಿ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು.. ಈ ಸಮಯದಲ್ಲಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತಾನಾಡಿದ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರು, ಗ್ರಾಮದ ಹಿರಿಯರು ಆದ ಯಜ್ಞ ನಾರಾಯಣ ಭಟ್ ಇವರು ಊರಿನಲ್ಲಿ ಇಂತಹ ಕ್ರೀಡಾಕೂಟಗಳು ನಡೆದಾಗ ಅತ್ಯಂತ ಸಡಗರ ವಾತಾವರಣ ಇರುತ್ತದೆ, ನಮ್ಮೂರಿನ ಎಲ್ಲಾ ಯುವಕರ ಶ್ರಮಕ್ಕೆ ಅಭಿನಂದನೆಗಳು ಹಾಗೂ ಕ್ರೀಡಾಕೂಟ ಅತ್ಯಂತ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.ಈ ಸಮಯದಲ್ಲಿ, ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಮಂಜು ಬಾಬು ಹೆಚ್ ಪಿ, ಶಿಕ್ಷಕಿ ಜಯಂತಿ ಎನ್ ಕೆ, ಮೆಸ್ಕಾಂ ನೌಕರ ಶ್ರೀಶೈಲ, ಹಾಗೂ ಯಜ್ಞ ನಾರಾಯಣ ಭಟ್ ಅವರನ್ನು ಸನ್ಮಾನಿಸಲಾಯಿತು, ಜೊತೆಗೆ ಕ್ರೀಡಾಕೂಟದ ಯಶಸ್ವಿಗೆ ತನು ಮನ ಧನ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಗೌರವ ಸ್ಮರಣಿಕೆ ನೀಡಲಾಯಿತು, ಮಾದರಿ ನೀತಿ ಸಂಹಿತೆ ಇರುವುದರಿಂದ , ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಸುಧಾ ದೇವರಾಜ್ ಹಾಗೂ ಸದಸ್ಯರಾದ, ಶ್ರೀ ದ್ವಿಜರಾಜ್ ಭಟ್, ಸಂದೀಪ್ ಗಾರ್ಡರ್ ಗದ್ದೆ, ಹಾಗೂ ಮೋಹನ್ ನಾಲೂರು ವೇದಿಕೆಯ ಮುಂಭಾಗದಲ್ಲಿ, ಜನರ ಮಧ್ಯ ಕುಳಿತು ಕಾರ್ಯಕ್ರಮ ವೀಕ್ಷಣೆ ಮಾಡಿದ್ದು ಹಾಗೂ ನೀತಿ ಸಂಹಿತೆ ಗೌರವಿಸಿದರು.ವೇದಿಕೆಯ ಮೇಲೆ, ಯಜ್ಞ ನಾರಾಯಣ್ ಭಟ್, ಮಲ್ಲಿಕಾರ್ಜುನ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ನಾಲೂರಿನ ಪ್ರಭಾಕರ ಗೌಡ್ರು, ಕೃಷಿಕರು, ದಾನಿಗಳಾದ, ಶ್ರೀಕಾಂತ್ ಭಟ್, ಅನಂತ್ ಭಟ್ ಹಾಗೂ ನಿವೃತ್ತ ಶಿಕ್ಷಕ ನಾಲೂರು ಮಂಜುನಾಥ್, ಮುಖ್ಯ ಶಿಕ್ಷಕಿ ಜಯಂತಿ ಎನ್ ಕೆ, ಮಂಜು ಬಾಬು ಹೆಚ್ ಪಿ ಹಾಗೂ ಶಿವಪ್ರಿಯ ಗೆಳೆಯರ ಬಳಗದ ಪರವಾಗಿ ಮಂಜು ನಾಲೂರು ಹಾಜರಿದ್ದರು..ಕ್ರೀಡಾಕೂಟದಲ್ಲಿ, ಮಲ್ಲಿಕಾರ್ಜುನ ದೇವಸ್ಥಾನ ಸಮಿತಿಯ ಸಹಕಾರ, ನಾಲೂರು ಗ್ರಾಮ ಪಂಚಾಯತಿ ಸಹಕಾರ, ನಾಲೂರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಸಹಕಾರ, ದಾನಿಗಳ, ಸ್ನೇಹಿತರ ಸಹಕಾರ, ಸಿಡಿ ಮದ್ದುಗಳು, ಅಚ್ಚುಕಟ್ಟಾದ ಊಟದ ವ್ಯವಸ್ಥೆ, ಉತ್ತಮ ಕ್ರೀಡಾಂಗಣದ ವ್ಯವಸ್ಥೆ, ಡ್ರೋನ್ ಹಾರಾಟ, ಅಂಟಿಗೆ ಪಂಟಿಗೆ ಜ್ಯೋತಿ, ಶಿವಪ್ರಿಯ ಗೆಳೆಯರ ಬಳಗದ ಶ್ರಮ ಮತ್ತು ಕ್ರೀಡಾಕೂಟದ ಹಿಂದೆ ಸಹಕಾರ ನೀಡಿದ ಪ್ರತಿಯೊಬ್ಬರ ಶ್ರಮ ಎದ್ದು ಕಾಣುವಂತಿತ್ತು.. ಕಾರ್ಯಕ್ರಮವನ್ನು, ಕು // ಸಂಹಿತ ಪ್ರಾರ್ಥನೆ ಮಾಡಿ, ನಾಗರಾಜ್ ಇಳಿಮನೆ ಸ್ವಾಗತ, ಪ್ರಾಸ್ತಾವಿಕ ಮಾತಾನಾಡಿ, ಮಂಜುನಾಥ್ ಮಾಸ್ಟರ್ ವಂದಿಸಿ, ಮಂಜುಬಾಬು ಅವರು ಕಾರ್ಯಕ್ರಮವನ್ನು ಅತ್ಯಂತ ಅಚ್ಚುಕಟ್ಟಾಗಿ ನಿರೂಪಸಿದರು. *ಕ್ರೀಡಾಕೂಟದ ಫಲಿತಾಂಶ* ಪ್ರಥಮ – ಶ್ರೀ ಸಿದ್ದಿವಿನಾಯಕ ಗೆಳೆಯರ ಬಳಗ ವಡದಕೂಡಿಗೆ, ನಾಲೂರುದ್ವೀತಿಯ : ನೇತಾಜಿ ಸ್ಪೋರ್ಟ್ಸ್ ಕ್ಲಬ್, ಹೊಸೂರು ಗುಡ್ಡೇಕೇರಿ, ತೃತೀಯ : ನೇತಾಜಿ ಸ್ಪೋರ್ಟ್ಸ್ ಹೊಸೂರು ಗುಡ್ಡೇಕೇರಿ ಚತುರ್ಥ : ಎಂ ಕೆ ಪ್ರೆಂಡ್ಸ್ ಅತ್ಯುತ್ತಮ ರಕ್ಷಣಾ ಆಟಗಾರ – ಶಶಿ ಎಂ ಕೆ ಪ್ರೆಂಡ್ಸ್ ಅತ್ಯುತ್ತಮ ಆಕ್ರಮಣಕಾರಿ ಆಟಗಾರ : ತುಷಾರ್ ಶೆಟ್ಟಿ ಹೊಸೂರು ಗುಡ್ಡೇಕೇರಿಅತ್ಯುತ್ತಮ ಸವ್ಯಸಾಚಿ ಆಟಗಾರ : ಸಂತೃಪ್ತ ಹೆಗ್ಗಡೆ ಹೊಸೂರು.


