- ದರ ಏರಿಕೆ ಬಗ್ಗೆ ಸಿ ಎಂ ಪ್ರತಿಕ್ರಿಯೆ ಏನು?

ಕೆಎಂಎಫ್ ನಿಂದ ರಾಜ್ಯಾಧ್ಯಂತ ನಂದಿನಿ ಹಾಲಿನ ದರ ಏರಿಕೆಯ ನಿರ್ಧಾರವನ್ನು ಪ್ರಕಟಿಸಿದೆ. ಈ ಹಿನ್ನಲೆಯಲ್ಲಿ ನಂದಿನಿ ವಿವಿಧ ಹಾಲಿನ ದರಗಳು ನಾಳೆಯಿಂದ ಹೆಚ್ಚಳವಾಗಲಿದ್ದಾವೆ. ಹಾಗಾದ್ರೇ ನಂದಿನಿ ಹಾಲಿನ ಉತ್ಪನ್ನಗಳಲ್ಲಿ ಯಾವುದಕ್ಕೆ ಎಷ್ಟು ಹೆಚ್ಚಾಗಲಿದೆ ಎಂಬುದು ಈ ಕೆಳಗಿನಂತಿದೆ.ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸಹಕಾರ ಹಾಲು ಮಹಾಮಂಡಳವಾಗಿ ಹೈನೋದ್ಯಮದಲ್ಲಿ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳವು ರಾಷ್ಟ್ರದಲ್ಲಿಯೇ ಎರಡನೆಯ ದೊಡ್ಡ ಮಹಾಮಂಡಳವಾಗಿದ್ದು, ದಕ್ಷಿಣ ಭಾರತದ ಕಾರ್ಯನಿರ್ವಹಿಸುತ್ತಿರುತ್ತದೆ. ಕಹಾಮವು ಕಳೆದ 05 ದಶಕಗಳಿಂದಲೂ ತನ್ನ ಸದಸ್ಯ ಹಾಲು ಒಕ್ಕೂಟಗಳ ಮೂಲಕ ರಾಜ್ಯದ 27 ಲಕ್ಷಕ್ಕೂ ಹೆಚ್ಚು ಹೈನುಗಾರರಿಂದ ಹಾಲು ಖರೀದಿಸಿ, ಸಂಸ್ಕರಿಸಿ, “ಗೋವಿನಿಂದ ಗ್ರಾಹಕರವರೆಗೆ” ಎಂಬ ಶೀರ್ಷಿಕೆಯನ್ನು ಹೊತ್ತು “ನಂದಿನಿ” ಬ್ಯಾಂಡ್‌ನಲ್ಲಿ ಉತ್ಕೃಷ್ಟ ಗುಣಮಟ್ಟದ ವಿವಿಧ ಮಾದರಿಯ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಗ್ರಾಹಕರ ಅಭಿರುಚಿಗೆ ತಕ್ಕಂತೆ ಪರಿಚಯಿಸಿರುತ್ತದೆ ಎಂದಿದೆ.ಈ ಕುರಿತಂತೆ ಸಿಎಂ ಸಿದ್ಧರಾಮಯ್ಯ ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ನಂದಿನಿ ಹಾಲಿನ ಪ್ಯಾಕೇಟ್ ಗಳಲ್ಲಿ ಹಾಲಿನ ಪ್ರಮಾಣವನ್ನು 50 ಎಂ.ಎಲ್ ಹೆಚ್ಚಳ ಮಾಡಿ, ಹೆಚ್ಚುವರಿ ಹಾಲಿಗೆ 2ರೂ ದರ ನಿಗದಿಪಡಿಸಿ ಗ್ರಾಹಕರಿಂದ ಸಂಗ್ರಹಿಸಲಾಗುತ್ತಿದೆಯೇ ವಿನಃ ಹಾಲಿನ ಬೆಲೆಯಲ್ಲಿ ಏರಿಕೆ ಮಾಡಿಲ್ಲ.ಅರ್ಧಲೀಟರ್ ಹಾಲಿನ ಪ್ಯಾಕೇಟ್ ನಲ್ಲಿ ಮುಂದೆ 550 ಎಂಎಲ್ ಹಾಲು ಹಾಗೂ ಲೀಟರ್ ಪ್ಯಾಕೇಟ್ ನಲ್ಲಿ 1,050 ಎಂಎಲ್ ಹಾಲು ಸಿಗಲಿದೆ ಅಂತ ತಿಳಿಸಿದ್ದಾರೆ.



