
ಶಿವಮೊಗ್ಗ : ರಾಜ್ಯದಲ್ಲಿ ಕುಷ್ಠ ರೋಗ ನಿರ್ಮೂಲನ ಕಾರ್ಯಕ್ರಮವನ್ನು ರಾಷ್ಟ್ರೀಯ ಮಟ್ಟದಲ್ಲಿ ಅಭಿಯಾನ ಕೈಗೊಂಡಿದ್ದು, ಈ ಸಂಬಂಧ ಶಿವಮೊಗ್ಗ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಇಲಾಖೆ ಶಿವಮೊಗ್ಗದ ಎಲ್ಲಾ ತಾಲೂಕಿನಲ್ಲೂ ಅಭಿಯಾನ ಶುರುವಾಗಿದೆ.

ಕಾರ್ಯಕ್ರಮದ ಅಂಗವಾಗಿ ಆಶಾ ಕಾರ್ಯಕರ್ತೆಯರು ಹಾಗೂ ದಾದಿಯರಿಂದ ಮನೆ ಮನೆ ಭೇಟಿ ನೀಡಿ ಕುಷ್ಠ ರೋಗ ಹಾಗೂ ಡೆಂಗ್ಯೂ ರೋಗದ ಬಗ್ಗೆ ಮಾಹಿತಿ ನೀಡಲಾಗುತಿದೆ .

ಮೈ ಮೇಲೆ ಸ್ಪರ್ಶ ಜ್ಞಾನವಿಲ್ಲದ ತಿಳಿ ಬಿಳಿ ಅಥವಾ ಕೆಂಪು, ತಾಮ್ರ ವರ್ಣದ ಮಚ್ಚೆಗಳ ಬಗ್ಗೆ ಮಾಹಿತಿ ನೀಡಿ ಅಂತಹ ಸಮಸ್ಯೆ ಇದ್ದರೆ ಕೂಡಲೇ ವೈದ್ಯರ ಸಲಹೆ ಪಡೆಯುವುದು ಅಗತ್ಯ ಎಂದು ಮಾಹಿತಿ ನೀಡಿದರು.

*ಕುಷ್ಠರೋಗ ಪತ್ತೆ ಹೇಗೆ ರೋಗ್ಯ ಲಕ್ಷಣಗಳೇನು*- ಸ್ಪರ್ಶ ಜ್ಞಾನವಿರದ ಮಚ್ಚೆ ಅಥವಾ ಕೈ ಕಾಲು ಜೋಮು ಹಿಡಿದಂತೆ ಅನಿಸುವುದು – ತಿಳಿ ಬಿಳಿ ಅಥವಾ ಕೆಂಪು, ತಾಮ್ರ ವರ್ಣದ ಮಚ್ಚೆ – ಸಾಮಾನ್ಯವಾಗಿ ನೋವು ಆಗೋದಿಲ್ಲ – ಕೆಂಪಾದ ಅಥವಾ ತ್ವಚೆಯ ಬಣ್ಣದ ಗಂಟುಗಳು ಇಲ್ಲವೇ ಸ್ಪರ್ಶ ಜ್ಞಾನ ವಿರದ ನಯವಾದ, ಹೊಳೆಯುವ ಮತ್ತು ಉಬ್ಬಿದ ತ್ವಚೆ
