– ರಾಜ್ಯ ಸರ್ಕಾರದ ಸುತ್ತೋಲೆ ಏನು? – ಆಚರಣೆ ಹೇಗೆ ಇಲ್ಲಿದೆ ಡೀಟೇಲ್ಸ್

ರಾಜ್ಯಾದ್ಯಂತ ನವೆಂಬರ್ 19 ರ ಇಂದಿನಿಂದ ನವೆಂಬರ್ 25 ರವರೆಗೆ ರಾಷ್ಟ್ರೀಯ ಐಕ್ಯತಾ ಸಪ್ತಾಹವನ್ನು ಆಚರಿಸುವಂತೆ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ.ರಾಜ್ಯಾದ್ಯಂತ ದಿನಾಂಕ 19.11.2023 ರಿಂದ 25.11.2023 ರವರೆಗೆ ‘ರಾಷ್ಟ್ರೀಯ ಐಕ್ಯತಾ ಸಪ್ತಾಹ’ ವನ್ನು ಆಚರಿಸಬೇಕೆಂದು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಅದರಂತೆ ರಾಷ್ಟ್ರದ ಸ್ವಾತಂತ್ರ್ಯ ಹಾಗೂ ಐಕ್ಯತೆಯನ್ನು ಬಲಪಡಿಸಲು, ದೇಶದಲ್ಲಿ ಹೆಚ್ಚುತ್ತಿರುವ ಹಿಂಸಾಚಾರ ಮತ್ತು ಕೋಮು ದ್ವೇಷವನ್ನು ತಡೆಗಟ್ಟುದಕ್ಕಾಗಿ ‘ರಾಷ್ಟ್ರೀಯ ಐಕ್ಯತಾ ಸಪ್ತಾಹ’ ವನ್ನು ಅರ್ಥಪೂರ್ಣವಾಗಿ ಆಚರಿಸಬೇಕೆಂದು ಉಲ್ಲೇಖಿತ ಪತ್ರದಲ್ಲಿದೆ.

ಕಾರ್ಯಕ್ರಮಗಳನ್ನು ನಡೆಸುವಾಗ ಭಾವೈಕ್ಯತಾ ಚಿಹ್ನೆಯನ್ನು ವೇದಿಕೆ ಮೇಲೆ ಪ್ರಮುಖವಾಗಿ ಪ್ರದರ್ಶನ ಮಾಡುವಂತೆ ಕ್ರಮ ಕೈಗೊಂಡು ಹಾಗೂ ದಿನಾಂಕ 19.11.2023 ಭಾನುವಾರದಂದು ಪೂರ್ವಾಹ್ನ 11.00 ಗಂಟೆಗೆ ತಮ್ಮ ಘಟಕದಲ್ಲಿ “ರಾಷ್ಟ್ರೀಯ ಐಕ್ಯತಾ ಸಪ್ತಾಹ” ಪ್ರಮಾಣ ವಚನವನ್ನು ಸ್ವೀಕರಿಸುವಂತೆ ಹಾಗೂ ಈ ಕಾರ್ಯಕ್ರಮದ ಬಗ್ಗೆ ಕೈಗೊಂಡ ಕ್ರಮದ ಕುರಿತು ಈ ಕಛೇರಿಗೆ ಪಾಲನಾ ವರದಿಯನ್ನು ತಪ್ಪದೇ ಕಳುಹಿಸುವಂತೆ ಕೋರಲಾಗಿದೆ.

Leave a Reply

Your email address will not be published. Required fields are marked *