• ಆರೋಪಿ ಫಯಾಜ್ ಉಗ್ರ ಶಿಕ್ಷೆ

ಎರಡು ದಿನಗಳ ಹಿಂದೆ ಸಹಪಾಠಿಯಿಂದ ಭೀಕರವಾಗಿ ಕೊಲೆಯಾಗಿರುವ ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ್‌ ಹತ್ಯೆ ಪ್ರಕರಣದ ಕುರಿತು ನಟಿ ರಚಿತಾ ರಾಮ್‌ ಪ್ರತಿಕ್ರಿಯೆ ನೀಡಿದ್ದಾರೆ. ಕೊಲೆಗಾರನಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ.ಆರೋಪಿ ಫಯಾಜ್ (Fayaz)​ ಮತ್ತು ನೇಹಾ ಸಹಪಾಠಿಗಳು.

ಬಿಸಿಎ ಅಂತಿಮ ವರ್ಷದಲ್ಲಿ ಓದುತ್ತಿರುವಾಗ ಫಯಾಜ್​ ನೇಹಾಳಿಗೆ ಪ್ರಪೋಸ್​ ಮಾಡಿದ್ದನು. ಅಲ್ಲದೆ ನಿಮ್ಮ ಮಗಳನ್ನು ನನಗೆ ಮದುವೆ ಮಾಡಿಕೊಡಿ ಅಂತ ನೇಹಾ ಪೋಷಕರಿಗೆ ಪದೇ ಪದೇ ಕರೆ ಮಾಡಿ ಪೀಡಿಸುತ್ತಿದ್ದನು. ಆಗ ನೇಹಾ ಪೋಷಕರು ನಮ್ಮ ಮಗಳು ನಿನ್ನನ್ನು ಇಷ್ಟಪಡುತ್ತಿಲ್ಲ, ಅವಳಿಗೆ ಹೆಚ್ಚಿನ ವ್ಯಾಸಂಗ ಮಾಡುವ ಇಚ್ಛೆ ಇದೆ ಎಂದು ಫಯಾಜ್​ಗೆ ಹೇಳಿದ್ದಾರೆ.

ಕಾಂಗ್ರೆಸ್ ಸರ್ಕಾರ ಮಗಳ ಹೆಣದ ಮೇಲೆ ರಾಜಕೀಯ ಮಾಡಲು ಹೊರಟಿದೆ.ನನ್ನ ಮಗಳ ಮೇಲೆ ಸುಳ್ಳು ಅಪವಾದನಮ್ಮ ಕುಟುಂಬದ ತೇಜೋವಧೆ- ನೇಹಾ ತಂದೆ ನಿರಂಜನ್ ಹಿರೇಮಠ

ನೇಹಾ ಪ್ರಕರಣದಲ್ಲಿ ತಮ್ಮ ಹೇಳಿಕೆಯಿಂದ ಪೋಷಕರಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಕ್ಷಮೆ ಯಾಚಿಸಿದ್ದಾರೆ.

Leave a Reply

Your email address will not be published. Required fields are marked *