
ರಾಜ್ಯದಲ್ಲಿ ಡಿಸೆಂಬರ್ 21ರಂದು ರಾಷ್ಟ್ರೀಯ ಪೋಲಿಯೋ ಲಸಿಕಾ ದಿನ ಆಚರಣೆಯೊಂದಿಗೆ ವಿಶೇಷ ಅಭಿಯಾನ ಆರಂಭವಾಗಲಿದೆ. ಈ ವೇಳೆ ರಾಜ್ಯದಲ್ಲಿ 5 ವರ್ಷದೊಳಗಿನ 62,40,114 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಇನ್ನು ರಾಜ್ಯದಲ್ಲಿ ಒಟ್ಟು 33,158 ಬೂತ್ಗಳನ್ನು ಸ್ಥಾಪಿಸಲಾಗಿದ್ದು, ಸಂಚಾರಿ ಬೂತ್ಗಳ ಮೂಲಕ ಗ್ರಾಮೀಣ ಮತ್ತು ದಟ್ಟಣೆಯ ಪ್ರದೇಶಗಳನ್ನು ಆವರಿಸಲಾಗುವುದು ಎಂದರು.

