- ಗೃಹ ಸಚಿವ ಡಾ| ಜಿ ಪರಮೇಶ್ವರ್ ಸ್ಪಷ್ಟನೆ

ವಿಧಾನಸೌಧ ಪ್ರವೇಶಕ್ಕೆ ಪಾಸ್ಗಳನ್ನು ಆನ್ಲೈನ್ ಮೂಲಕವೇ ವಿತರಿಸಲಿದ್ದು, ಕ್ಯುಆರ್ ಕೋಡ್ ಮೂಲಕ ಪಾಸ್ಗಳನ್ನು ದೃಢೀಕರಿಸಿಕೊಂಡು ಪ್ರವೇಶ ಕಲ್ಪಿಸಲು ಸರಕಾರ ನಿರ್ಧರಿಸಿದೆ. ಗೃಹ ಸಚಿವ ಡಾ| ಪರಮೇಶ್ವರ ಈ ಹೊಸ ನಿಯಮ ಜಾರಿಯ ಬಗ್ಗೆ ಮಾಹಿತಿ ನೀಡಿದ್ದಾರೆ.ಗುಣ ಮಟ್ಟದ ಉಪಕರಣ ಅಳವಡಿಸಿರುವುದರಿಂದ, ಅನುಮಾನಾಸ್ಪದ ವಸ್ತುಗಳನ್ನು ತೆಗೆದು ಕೊಂಡು ಬಂದರೆ, ಪತ್ತೆಹಚ್ಚಲು ಸುಲಭವಾಗುತ್ತದೆ ಎಂದರು.ಈ ಎರಡು ಕಟ್ಟಡಗಳಲ್ಲಿರುವ ಜನಪ್ರತಿನಿಧಿಗಳು, ಸರಕಾರಿ ಅಧಿಕಾರಿಗಳ ಭೇಟಿಗೆ ಅಪರಾಹ್ನ 2.30ರಿಂದ ಸಂಜೆ 5.30ರ ವರೆಗೆ ಸಮಯ ನಿಗದಿಪಡಿಸಲಾಗಿದೆ. ಅದೇ ಅವಧಿಯಲ್ಲಿ ಆನ್ಲೈನ್ ಮೂಲಕ ಸಾರ್ವಜನಿಕರು ಪ್ರವೇಶ ಪಾಸು ಪಡೆದು ಭೇಟಿ ಮಾಡಬಹುದಾಗಿದೆ.ಪಾಸ್ ಹೇಗೆ ಸಿಗುತ್ತದೆ?-ಪಾಸ್ ಬಯಸುವವರು ಆಯಂಡ್ರಾಯ್ಡ ಮೊಬೈಲ್ನಲ್ಲಿ ಕರ್ನಾಟಕ ಒನ್ ಆಯಪ್ ಡೌನ್ಲೋಡ್ ಮಾಡಿಕೊಳ್ಳಬೇಕು.-ತಮ್ಮ ಮೊಬೈಲ್ ಸಂಖ್ಯೆ ನೋಂದಾಯಿಸಿ, ಒಟಿಪಿ ದಾಖಲಿಸಿ, ಆಯಪ್ ತೆರೆಯಬೇಕು.-ತಮ್ಮ ಹೆಸರು, ವಿಳಾಸ, ಆಧಾರ್ ಸಂಖ್ಯೆ ಮತ್ತಿ ತರ ಮಾಹಿತಿ ಭರ್ತಿ ಮಾಡಬೇಕು.-ಅನಂತರ ವಿಧಾನಸೌಧ ಅಥವಾ ವಿಕಾಸಸೌಧ ವನ್ನು ಆಯ್ಕೆ ಮಾಡಿಕೊಳ್ಳಬೇಕು.-ಅಧಿಕಾರಿಗಳು ದಾಖಲೆ ಪರಿಶೀಲಿಸಿ, ಕ್ಯುಆರ್ ಕೋಡ್ ಸ್ಕ್ಯಾನರ್ ಲಿಂಕ್ ಕಳುಹಿಸುತ್ತಾರೆ.


