
ಮೊಂಡತನ ಬಿಟ್ಟು ಕನ್ನಡಿಗರಲ್ಲಿ ಕ್ಷಮೆ ಕೇಳಿ -ಆಗ್ರಹ
ತೀರ್ಥಹಳ್ಳಿ :ಬಹುಭಾಷಾ ನಟ ಕಮಲ್ ಹಾಸನ್ ಮಂಡ ಹಟ ಬಿಡಬೇಕು ಪಡುವಳ್ಳಿ ಕಿಟ್ಟಪ್ಪ ಅಕ್ರೋಶ ವ್ಯಕ್ತಪಡಿಸಿದ್ದಾರೆ. ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದೆ ಎಂದು ವಿವಾದ ಹೇಳಿಕೆ ನೀಡಿ ಏಳುವರೆ ಕೋಟಿ ಕನ್ನಡಿಗರಿಗೆ ಅವಮಾನ ಮಾಡಿರುವ ಬಹುಭಾಷಾ ನಟ ಕಮಲ್ ಹಾಸನ್ ತನ್ನ ಮಂಡ ತನ ಬಿಟ್ಟು ಕ್ಷಮೆ ಯಾಚಿಸಬೇಕು ಕ್ಷಮೆ

ಯಾಚಿಸದಿದ್ದರೆ ಅವರ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆಯಾಗದಂತೆ ತಡೆ ಹಿಡಿಯಬೇಕು ತಪ್ಪು ಮಾಡುವುದು ದೊಡ್ಡದಲ್ಲ ಆದರೆ ಅದನ್ನು ತಿದ್ದಿ ನಡೆದರೆ ದೊಡ್ಡ ಮನುಷ್ಯರಾಗುತ್ತಾರೆ ದೊಡ್ಡ ಮನೆಯವರು, ಅವರ ಸ್ನೇಹ ಪ್ರೀತಿ ಬಿಟ್ಟು ಕನ್ನಡ ಭಾಷೆಪರ ನಿಲ್ಲಬೇಕು ಕನ್ನಡದ

ಭಾಷೆ ನೆಲ ಜಲದ ಸಮಸ್ಯೆ ಬಂದಾಗ ಕನ್ನಡದ ಅನ್ನ ತಿಂದವರು ವಿಭಿನ್ನ ಹೇಳಿಕೆ ನೀಡುವುದನ್ನು ಬಿಟ್ಟು ಕನ್ನಡದ ಪರ ನಿಲ್ಲಬೇಕು ಇದು ಕನ್ನಡದ ಅಭಿಮಾನ ಬಹು ಭಾಷಾ ನಟ ಕಮಲ್ ಹಾಸನ್ ರವರ ಮಂಡ ಹೇಳಿಕೆಯನ್ನು ಖಂಡಿಸುತ್ತೇನೆ ಎಂದು ನಿವೃತ್ತ ಶಿಕ್ಷಕರಾದ ಪಡುವಳ್ಳಿ ಕಿಟ್ಟಪ್ಪ ಅಗ್ರಹಿಸಿದ್ದಾರೆ.



