*ಓಮ್!*
*ರುಚಂ ನೋ ಧೇಹಿ ಬ್ರಾಹ್ಮಣೇಷು*
*ರುಚಂ ರಾಜಸು ನಸ್ಕೃಧಿ |*
*ರುಚಂ ವಿಶ್ಯೇಷು ಶೂದ್ರೇಷು*
*ಮಯಿ ಧೇಹಿ ರುಚಾ ರುಚಮ್ ||*
(ಯಜುರ್ವೇದ)

ಪ್ರಭೋ!
ನಮ್ಮ ಬ್ರಾಹ್ಮಣರಲ್ಲಿ ಪ್ರೇಮವನ್ನು ತುಂಬಿಸು.
ನಮ್ಮ ಕ್ಷತ್ರಿಯರಲ್ಲಿ ಪ್ರೇಮವನ್ನುಂಟುಮಾಡು.
ವೈಶ್ಯರಲ್ಲಿ, ಶೂದ್ರರಲ್ಲಿ ಪ್ರೇಮವನ್ನು ತುಂಬಿಸು.
ನನ್ನಲ್ಲೂ ಪ್ರೇಮವನ್ನು ತುಂಬಿಸು.
ಇದೇ ಪ್ರಾರ್ಥನೆಯನ್ನು ಹೀಗೂ ಅರ್ಥೈಸಬಹುದು:
_ನಮಗೆ ಬ್ರಾಹ್ಮಣರ ಬಗೆಗೆ ಪ್ರೇಮವನ್ನು ಹುಟ್ಟಿಸು._
_ನಮಗೆ ಕ್ಷತ್ರಿಯರ ಬಗೆಗೆ ಪ್ರೇಮವನ್ನುಂಟುಮಾಡು._
_ವೈಶ್ಯರ, ಶೂದ್ರರ ಬಗೆಗೂ ಪ್ರೇಮವನ್ನೇ ಬೆಳೆಯಿಸು._
_ನಿನ್ನ ದಿವ್ಯಪ್ರೇಮದಿಂದ ನನ್ನ ಬಗೆಗೂ ಎಲ್ಲರಿಗೂ ಪ್ರೇಮವನ್ನುಂಟುಮಾಡು._
ವಸ್ತುತಃ ಸರ್ವಮಾನವೋದ್ಧಾರಕ್ಕೆ ಸರ್ವೋತ್ಕೃಷ್ಟ ಸಾಧನವಾದ ಈ ವರ್ಣವ್ಯವಸ್ಥೆ, ತನ್ನ ನಿಜರೂಪದಲ್ಲಿ ಪ್ರಕಟವಾದರೆ ಸಮಾಜ ಸ್ವರ್ಗವಾದೀತು. ಆದರೆ, ಗುಣ-ಕರ್ಮಕ್ಕನುಸಾರ ವಿಭಾಗಿಸಲ್ಪಟ್ಟ ಈ ವರ್ಣವ್ಯವಸ್ಥೆಯು ಅರಾಜಕೀಯ ಜಾತಿವಾದದಲ್ಲಿ ಇಳಿದು ಬಂದು ಮಾನವ ಸಮಾಜವನ್ನು ನರಕಸದೃಶವನ್ನಾಗಿ ಮಾಡಿತು. ನಮ್ಮ ಕರ್ತವ್ಯಗಳು ಬೇರೆ ಬೇರೆಯಾದರೂ, ನಾವೆಲ್ಲರೂ ಒಂದೇ ಎಂಬ ಭಾವನಾತ್ಮಕ ಏಕತೆಯನ್ನು ಗುರುತಿಸೋಣ.
– ಪಂ.ಸುಧಾಕರ ಚತುರ್ವೇದಿ.
*i🙏 ಶುಭದಿನವಾಗಲಿ! 🙏🌺🌷*
ಕಮ್ಮರ್ಡಿ ರಾಧಾಕೃಷ್ಣ ಜೋಯಿಸ್
ಬೆಂಗಳೂರು.