
ಅನರ್ಘ್ಯ ಜೋತಿಷ್ಯರತ್ನ ವಾಸ್ತು ಶಾಸ್ತ್ರಜ್ಞ ಶ್ರೀ ಅಶೋಕ್ ಪುರೋಹಿತ್ ಇವರ ನೂತನ ಜ್ಯೋತಿಷ್ಯಾಲಯವು ದಿನಾಂಕ 29-12-2024 ನೇ ಭಾನುವಾರ ದಿನ ಶುಭಾರಂಭಕ್ಕೆ ವಿಷೇಶವಾಗಿ ಆಹ್ವಾನಿತರಾಗಿ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಮಹಾ ಸ್ವಾಮೀಜಿಯವರು ಹಾಗೂ ಅಯೋಧ್ಯೆಯ ರಾಮಲಲ್ಲಾ ಮೂರ್ತಿ ಶಿಲ್ಪಿಗಳಾದ ಶ್ರೀ ಅರುಣ್ ಯೋಗಿರಾಜ್, ಆಗಮಿಸಲಿದ್ದು,ಈ ಕಾರ್ಯಾಲಯ ಉಧ್ಘಾಟಿಸಲಿದ್ದಾರೆ.

ದೇಶ ವಿದೇಶಗಳಿಂದ ವಿಶೇಷ ಗಣ್ಯಾತಿಗಣ್ಯರು, ಹಾಗೂ ತುಳುಕನ್ನಡ ಗಡಿನಾಡಿನಲ್ಲಿ ನೆಲೆಸಿರುವ 25ಕ್ಕು ಹೆಚ್ಚಿನ ಸಂಘ ಸಂಸ್ಥೆಗಳ ಅಧ್ಯಕ್ಷರು ಮುಖಂಡರುಗಳು, ನಾಯಕರು, ದೇಶ ವಿದೇಶಗಳಿಂದ ಆಗಮಿಸಲಿದ್ದಾರೆ.ಶ್ರೀ ಅಶೋಕ್ ಪುರೋಹಿತರು ಮೂಲತಃ ತೀರ್ಥಹಳ್ಳಿ ತಾಲೂಕಿನ ಗಡಿಕಲ್ಲು ಸಮೀಪದ ಕಿರಣ್ ಕೆರೆಯವರು ಶ್ರೀಮತಿ ನೇತ್ರಾವತಿ ಶ್ರೀ ಸುಬ್ರಾಯ ಆಚಾರ್ಯರ ಐದನೆಯ ಪುತ್ರನಾಗಿ 1974 ರಲ್ಲಿ ಜನಿಸಿದ್ದು, ಮಂಗಳೂರಿನ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಗುರುಗಳಾದ ದಿವಂಗತ ಬ್ರಹ್ಮಶ್ರೀ ಶ್ರೀ ಜನಾರ್ಧನ ಪುರೋಹಿತ್ ಅವರಲ್ಲಿ ಶಿಷ್ಯರಾಗಿ 12 ವರ್ಷಗಳ ನಿರಂತರ ಜ್ಯೋತಿಷ್ಯ ಅಧ್ಯಯನ ಅಭ್ಯಾಸ ಮಾಡಿ.ನಂತರ ಗುರುಗಳಾದ ನಾರ್ವೆ ಶ್ರೀ ನಾಗೇಂದ್ರ ಭಟ್ ಶುಕ್ರನಾಡಿ ಇವರಲ್ಲಿ ಜ್ಯೋತಿಷ್ಯ ಅಭ್ಯಾಸ ಮಾಡಿದ್ದಾರೆ. ವೃತ್ತಿಜೀವನಕ್ಕೆ ಕರ್ಮಭೂಮಿಯಾಗಿ ಮುಂಬಾಯಿಲ್ಲಿ ಜ್ಯೋತಿಷ್ಯ ಹಾಗೂ ವಾಸ್ತುಶಾಸ್ತ್ರ ಮೂಲಕ ಜನರ ಸಂಕಷ್ಟ ನಿವಾರಣೆ ಮಾಡುತ್ತ,ಹಿಂದಿ ಸಿನೆಮಾ ಹಾಗೂ ಮರಾಠಿ ಚಿತ್ರರಂಗದ ಸುಪ್ರಸಿದ್ಧ ತಾರೆಯರಿಗೆ ಮಾರ್ಗದರ್ಶನ ನೀಡಿದವರಾಗಿದ್ದು,

ಕನ್ನಡ ಚಿತ್ರರಂಗದ ದಿಗ್ಗಜ ಚಿತ್ರನಟ, ನಟಿಯರಿಗೂ, ಮಾರ್ಗದರ್ಶನ ನೀಡಿದ ಕೀರ್ತಿ ಇವರದ್ದಾಗಿದ್ದು,ರಾಜಕೀಯದವರಿಗೂ , ಹೋಟೆಲ್ ಉದ್ಯಮಿಯವರಿಗು ಮಾರ್ಗದರ್ಶನ ನೀಡುತ್ತಾ.ಪ್ರಸ್ತುತ ಅಮೇರಿಕ, ಸೈಪ್ರಸ್, ಫ್ರಾನ್ಸ್ ,ದುಬೈ,ಕುವೈತ್, ಮಸ್ಕತ್, ಬ್ಯಾರಿನ್, ಹತ್ತು ಹಲವು ರಾಷ್ಟ್ರಗಳಿಗೆ ಬೇಟಿ ನೀಡಿ ಅಲ್ಲಿಯ ಜನರಿಗೆ ವಾಸ್ತುಶಾಸ್ತ್ರ ಜ್ಯೋತಿಷ್ಯದಿಂದ ಅವರ ಸಮಸ್ಯೆ ಸುಲಭ ವಿಧಾನ ಮೂಲಕ ಬಗೆಹರಿಸಿ ವಿದೇಶಗಳಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದು, ವಾಸ್ತು ಹಾಗೂ ಜ್ಯೋತಿಷ್ಯದ ಮಾರ್ಗದರ್ಶನ ನೀಡಿದ್ದಾರೆ.ಜೊತೆಗೆ ಹಿಂದೂಗಳು ಮಾತ್ರವಲ್ಲದೆ ಮುಸ್ಲಿಂಮರು ಹಾಗು ಕ್ರಿಶ್ಚಿಯನ್ ಇವರೊಂದಿಗೆ ಸಂಪರ್ಕದಲ್ಲಿರುವುದು ವಿಶೇಷವಾಗಿದೆ.ಶ್ರೀ ಅಶೋಕ್ ಪುರೋಹಿತ್ ಇವರು 2015 ರಲ್ಲಿ ಸೈಪ್ರೆಸ್ ದೇಶದಲ್ಲಿ ನಡೆದ ಇಂಡಿಯನ್ ಫೆಸ್ಟಿವಲ್ ನಲ್ಲಿ ಭಾರತದಿಂದ ಪ್ರತಿನಿಧಿಸಿದ್ದ ಏಕೈಕ ಜ್ಯೋತಿಷಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಇವರಿಗೆ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ,ರಾಘವೇಂದ್ರ ಸದ್ಭಾವನಾ ಪ್ರಶಸ್ತಿ ,ಗಡಿನಾಡ ಪ್ರಶಸ್ತಿ ,ವಾಸ್ತು ಜ್ಯೋತಿಷ್ಯ ಪ್ರಾಜ್ಞ ಪ್ರಶಸ್ತಿ ,ಜ್ಯೋತಿಷ್ಯ ರತ್ನ ಪ್ರಶಸ್ತಿ ,ವಾಸ್ತು ಭೂಷಣ ,ಪ್ರಶಸ್ತಿ ಇವರನ್ನು ಅಲಂಕರಿಸಿವೆ.

ಹಲವಾರು ಕಲಾವಿದರಿಗೆ ,ಸಂಘಟಕರಿಗೆ ಪ್ರೋತ್ಸಹ ನೀಡಿ ಮಾರ್ಗದರ್ಶನ ನೀಡುತ್ತಿದ್ದಾರೆ .ತೀರ್ಥಹಳ್ಳಿಯ ಜನತೆ ಅಪಾರ ಅಭಿಮಾನಿಗಳು ಅಶೋಕ್ ಪುರೋಹಿತ್ ಇವರಿಗೆ ನೂತನ ಕಚೇರಿ ಉದ್ಘಾಟನೆಗೆ ಶುಭ ಹಾರೈಸಿದ್ದಾರೆ.



