- ಪೋಷಕರಿಗೆ ಸಾಂತ್ವನ
- ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಪರಿಹಾರ ನೀಡಲು ಸೂಚನೆ

ಶಿವಮೊಗ್ಗ :ಹಾದಿಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೀನ್ಮನೆಕೊಪ್ಪ ಅಕೇಶಿಯ ಮರ ಬಿದ್ದು ಮೃತಪಟ್ಟ ಸಚಿನ್ ಮನೆಗೆ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ .ಆರ್ ಎಂ ಮಂಜುನಾಥ್ ಗೌಡರು ಭೇಟಿ ನೀಡಿ ಅವರ ಕುಟುಂಬಕ್ಕೆ ದೈರ್ಯ ನೀಡಿ ಸ್ಥಳದಿಂದ ಜಿಲ್ಲಾಧಿಕಾರಿಗಳಿಗೆ ಫೋನ್ ಮೂಲಕ ಮಾತನಾಡಿ ತಕ್ಷಣ ಪರಿಹಾರದ ಚೆಕ್ ನೀಡಿವಂತೆ ತಿಳಿಸಿದರು.ನಂತರ ಬಡಕುಟುಂಬ ಜೊತೆಗೆ ಮಾತನಾಡಿ ಮಾನ್ಯ ಜಿಲ್ಲಾ ಮಂತ್ರಿಗಳಾದ ಮಧುಬಂಗಾರಪ್ಪ ಕೂಡ ಇಲ್ಲಿಗೆ ಬರ್ತಾರೆ ಎಂದು ಯುವಕನ ತಂದೆ ರಾಮಪ್ಪ ಅವರಿಗೆ ತಿಳಿಸಿ ವೈಯಕ್ತಿಕ ಧನ ಸಹಾಯ ಮಾಡಿದರು .ಈ ಸಂಧರ್ಭದಲ್ಲಿ ಕೊಣಂದೂರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಂಗಳಾ ಗೋಪಿ, ಹಾದಿಗಲ್ಲು ಗ್ರಾಮ ಉಪಾಧ್ಯಕ್ಷರಾದ ರವೀಶ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪರಮೇಶ್ ,ಕಾಂಗ್ರೆಸ್ ಪಕ್ಷದ ಮುಖಂಡರು ಅಮೀರ್ ಹಂಜಾ ಕುರುವಳ್ಳಿ ನಾಗರಾಜ್,ಚೇತನ್ ಯಡೂರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
