ಚಿಕ್ಕಮಗಳೂರಿನಲ್ಲಿ ಮಳೆ ಅವಾಂತರ ಮುಂದುವರಿದ್ದು, ಬಿರುಗಾಳಿಗೆ ಮನೆಯ ಮೇಲೆ ಬೃಹತ್ ಗಾತ್ರದ ಮರ ಬಿದ್ದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಬಾಳೆಹೊಳೆ ಕಗ್ಗನಹಳ್ಳಿ ಗ್ರಾಮದಲ್ಲಿ ನಡೆದಿದೆ.ಮನೆಯಲ್ಲಿದ್ದ ಐವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೈಸೂರಿನಲ್ಲಿ ಮಳೆ ಮುಂದುವರಿದಿದ್ದು, ಸರಗೂರು ತಾಲೂಕಿನ ಬಾಡಿಗೆ ಗ್ರಾಮದಲ್ಲಿ ಜವರಯ್ಯ, ಪುಟ್ಟತಾಯಮ್ಮ ಎಂಬುವವರ 4 ಲಕ್ಷ ಮೌಲ್ಯದ ಶುಂಠಿ ನಾಶವಾಗಿದೆ.

ಉಡುಪಿ ಯ ಶಿರ್ವ ಪಂಚಾಯತ್ ವ್ಯಾಪ್ತಿಯ ಮಾಣಿಬೆಟ್ಟು ಬಳಿ ಯುವಕನಿಗೆ ಸಿಡಿಲು ಬಡಿದು ಮೃತನಾದ ಘಟನೆ ನಡೆದಿದೆ.ಶಿರ್ವ ಮಾಣೆಬೆಟ್ಟು ನಿವಾಸಿ ರಕ್ಷಿತ್ ಪೂಜಾರಿ ಮೃತ ದುರ್ದೈವಿ.ಕೂಡಲೇ ಕುಟುಂಬಸ್ಥರು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 10 ಗಂಟೆಗೆ ಮೃತಪಟ್ಟಿದ್ದಾನೆ.ಬೆಳಗಾವಿ : ರಾಯಭಾಗ ಪಟ್ಟಣದ ಜಮೀನೊಂದರಲ್ಲಿ ಕಬ್ಬು ನಾಟಿ ಮಾಡುವಾಗ ಸಿಡಿಲು ಬಡಿದು ಶೋಭಾ ಕೃಷ್ಣ ಕುಲಗೋಡೆ (45) ಎಂಬ ಮಹಿಳೆ ಮೃತಪಟ್ಟರೆ, ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ರಾಯಭಾಗ ಪಟ್ಟಣದ ಆಸ್ಪತ್ರೆಗೆ ದಾಖಲಿಸಲಾಗಿದೆ.ಇದೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೆಬ್ಬಾಳದಲ್ಲಿ ಗುರು ಪುಂಡಲಿಕ ಸಾವಿಗೀಡಾಗಿದ್ದಾರೆ.

ಬಾಗಲಕೋಟೆಯಲ್ಲಿ ಗುಡುಗು, ಮಿಂಚು, ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಬಾರಿ ಹಾನಿಯಾಗಿದೆ. ಬಾಗಲಕೋಟೆ ಜಿಲ್ಲೆ ಬಾದಾಮಿಯ ಕೆರಕಲಮಟ್ಟಿ ಗ್ರಾಮ, ಕೇದಾರನಾಥ ಸಕ್ಕರೆ ಕಾರ್ಖಾನೆ ವ್ಯಾಪ್ತಿಯಲ್ಲಿ ಭಾರಿ ಅವಾಂತರಗಳೇ ನಡೆದಿವೆ. ಹಿರೇಶೆಲ್ಲಿಕೇರಿ ರಸ್ತೆಯಲ್ಲಿ 10ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ತುಳಸಿಗೇರಿ, ದೇವನಾಳ ಭಾಗದಲ್ಲಿ ಆಪಾರ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿವೆ.

ತೀರ್ಥಹಳ್ಳಿ :ತಾಲೂಕು ಕಡ್ತೂರಿನ ಏರಿಗದ್ದೆ ಬಳಿ ಮರ ಬಿದ್ದು ಮೇನ್ ಲೈನ್ ಕಂಬ ಕಟ್ಟಾಗಿದ್ದು , ಕಡ್ತೂರು,ಮಳಲೂರು ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಒದಗಿಸುವ ಮೈನ್ ಲೈನ್ ಹೋಗಿರುತ್ತದೆ. ಮಧ್ಯಾಹ್ನದ ನಂತರ ವಿದ್ಯುತ್ ಸರಬರಾಜು ಮಾಡಲಾಗುತ್ತದೆ ದಯವಿಟ್ಟು ಗ್ರಾಹಕರು ಸಹಕರಿಸಿ ಎಂದು ಮೆಸ್ಕಾಂ ಇಲಾಖೆ ಗ್ರಾಮಸ್ಥರಿಗೆ ಮನವಿ ಮಾಡಿದೆ.

Leave a Reply

Your email address will not be published. Required fields are marked *