
ವೇದ ಬ್ರಹ್ಮಶ್ರೀ ಹೃಷಿಕೇಶ ಬಾಯರ್ ನೇತೃತ್ವದಲ್ಲಿ ನಡೆಯಲಿದೆ ಧಾರ್ಮಿಕ ಕೈಂಕಾರ್ಯಗಳು – ನಾಲೂರು ಜಾತ್ರೆಗೆ ಆತ್ಮೀಯ ಸ್ವಾಗತ

ತೀರ್ಥಹಳ್ಳಿ : ತಾಲೂಕಿನ ಆಗುಂಬೆ ಹೋಬಳಿ ನಾಲೂರು ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ರಥೋತ್ಸವವನ್ನು ನ. 17 ರ ಸೋಮವಾರ ಜರುಗಲಿದ್ದು, ಮಾನ್ಯ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತನು ಮನ ಧನ ದೊಂದಿಗೆ ಸಹಕರಿಸಿ ದೇವರ ಕೃಪೆಗೆ ಪಾತ್ರರಾಗಲು ಈ ಮೂಲಕ ಮಲ್ಲಿಕಾರ್ಜುನ ದೇವಸ್ಥಾನ ಜೀರ್ಣೊದ್ಧಾರ ಸಮಿತಿ ಆಹ್ವಾನಿಸಿದೆ.

ನ 17 ರ ಸೋಮವಾರ ಬೆಳಿಗ್ಗೆ ಗುರು ಗಣಪತಿ ಪ್ರಾರ್ಥನೆ, ಪುಣ್ಯಾಹ ವಾಚನ, ಹಾಗೂ ಶ್ರೀ ಮಲ್ಲಿಕಾರ್ಜುನ ಸ್ವಾಮಿಗೆ ಅಧಿವಾಸ ಹೋಮ, ಬ್ರಹ್ಮ ಕುಂಭಾಭಿಷೇಕ, ಸಾಮೂಹಿಕ ಏಕಾದಕ ರುದ್ರಾಭಿಷೇಕ, ಮಹಾಪೂಜೆ, ಹಾಗೂ ಶ್ರೀ ನಾಗ ಸನ್ನಿದಿಯಲ್ಲಿ ನವಕ ಪ್ರಧಾನ ಕಲಶಾಭಿಷೇಕ, ಮಹಾ ಪೂಜಾದಿಗಳು, ಮದ್ಯಾಹ್ನ ಗಂಟೆ 12 30 ರಿಂದ 1 ಗಂಟೆ ವರೆಗೆ ಮಹಾಮಂಗಳಾರತಿ,

ತೀರ್ಥ ಪ್ರಸಾದ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ಜೊತೆಗೆ ಇದೆ ದಿನ ರಾತ್ರಿ 8ಗಂಟೆಗೆ ರಂಗಪೂಜೆ ಮಹಾ ಮಂಗಳಾರತಿ ಹಾಗೂ ಶ್ರೀ ಸ್ವಾಮಿಯ ರಥೋತ್ಸವ ಇರಲಿದೆ.ವಿ. ಸೂಚನೆ : ಸೇವೆಯನ್ನು ಮಾಡಿಸುವರು ಸೇವಾ ರಶೀದಿ ಪಡೆದು ಮದ್ಯಾಹ್ನ 12 ರ ಒಳಗೆ ಸಂಕಲ್ಪ ಮಾಡಿಕೊಳ್ಳಬೇಕಾಗಿ ವಿನಂತಿ.

