– 14 ತಿಂಗಳ ಬಂಧನದಲ್ಲಿದ್ದ ಮುರುಗಶ್ರೀ -ಎರಡನೇ ಪ್ರಕರಣದ ಮಾಹಿತಿ ಏನು?

ಪೋಕ್ಸೋ ಪ್ರಕರಣದಲ್ಲಿ 14 ತಿಂಗಳ ಹಿಂದೆ ಬಂಧನಕ್ಕೆ ಒಳಗಾಗಿದ್ದ ಚಿತ್ರದುರ್ಗದ ಡಾ.ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ ಅವರು ಜೈಲಿನಿಂದ ಬಿಡುಗಡೆಯಾಗಿದ್ದಾರೆ.ಕಳೆದ ವಾರವೇ ಹೈಕೋರ್ಟ್ ಜಾಮೀನು ನೀಡಿತ್ತು. ಮತ್ತೊಂದು ಪ್ರಕರಣದಲ್ಲಿ ಚಿತ್ರದುರ್ಗದಲ್ಲಿ ಗುರುವಾರ ವಿಚಾರಣೆ ನಡೆಯುತ್ತಿದೆ.ಅಲ್ಲಿಯೂ ಜಾಮೀನು ದೊರೆಯುವ ನಿರೀಕ್ಷೆಯಿತ್ತು.ಚಿತ್ರದುರ್ಗದ ಎರಡನೇ ಹೆಚ್ಚುವರಿ ನ್ಯಾಯಾಲಯದಲ್ಲಿ ಶರಣರ ವಿರುದ್ದ ಎರಡನೇ ಪ್ರಕರಣದ ವಿಚಾರಣೆ ನಡೆದಿದೆ. ಸ್ವಾಮೀಜಿ ಅವರಿಗೆ ನೀಡಿರುವ ಬಾಡಿ ವಾರೆಂಟ್ ಅನ್ನೇ ಬಂಧನ ವಾರೆಂಟ್ ಆಗಿ ಬದಲಾಯಿಸಲು ಆಗುವುದಿಲ್ಲ. ಎರಡನೇ ಪ್ರಕರಣದಲ್ಲಿ ಶರಣರು ಬಂಧನಕ್ಕೆ ಒಳಗಾಗಿಲ್ಲ. ಇದರಿಂದ ಅವರಿಗೆ ಜಾಮೀನಿನ ಅಗತ್ಯವಿಲ್ಲ ಎನ್ನುವ ಕುರಿತು ಸಾಕಷ್ಟು ಚರ್ಚೆಗಳು ನಡೆದವು. ಶರಣರ ಪರ ವಕೀಲ ಸಂದೀಪ್ ಪಾಟೀಲ್ ಮತ್ತಿತರರು ವಾದಿಸಿ ಶರಣರ ಬಿಡುಗಡೆಗೆ ಅಡ್ಡಿಯಿಲ್ಲ ಎಂದರು. ಆದರೆ ಸರ್ಕಾರದ ಪರ ವಕೀಲ ಜಗದೀಶ್ ಇದಕ್ಕೆ ವಿರೋಧ ವ್ಯಕ್ತಪಡಿಸಿ, ಎರಡನೇ ಪ್ರಕರಣದಲ್ಲಿ ಶರಣರ ವಿಚಾರಣೆ ನಡೆದಿರುವುದರಿಂದ ಅವರನ್ನು ಜೈಲಿನಿಂದ ಬಿಡುಗಡೆ ಮಾಡಬಾರದು ಎಂದು ವಾದಿಸಿದರು.ಇದೇ ಪ್ರಕರಣದ ಕುರಿತು ಗುರುವಾರವೂ ವಿಚಾರಣೆ ನಡೆದಿದ್ದರ ನಡುವೆಯೇ ಶರಣರನ್ನು ಮೊದಲ ಪ್ರಕರಣದಲ್ಲಿ ಬಿಡುಗಡೆ ಮಾಡಲಾಗಿದೆ.