
ಉಡುಪಿ : ಬೆಳ್ವೆ ಯ ಹೆಂಗವಳ್ಳಿಗ್ರಾಮದ ಮರೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಸರಸ್ವತಿ ಇವರಿಗೆ 2025-26ನೇ ಸಾಲಿನ ಉಡುಪಿ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನು ಶಿಕ್ಷಕರ ದಿನಾಚರಣೆಯ ದಿನದಂದು ನೀಡಿ ಗೌರವಿಸಲಾಯಿತು,ಸು 27 ವರ್ಷಗಳ ಕಾಲ ವಿವಿಧ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದು,

ಪಾಠದ ಜೊತೆಗೆ ಶಾಲೆಯ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದ್ದಾರೆ. ಇವರು ಅಲ್ಬಾಡಿ ದಿ ಸುಧಾಕರನ್ ನೇತ್ರಾವತಿ ದಂಪತಿಗಳ ಪುತ್ರಿಯಾಗಿದ್ದು ಪತಿ ಪ್ರಭಾಕರ್ ಕೂಡ ತೀರ್ಥಹಳ್ಳಿ ತಾಲೂಕಿನ ತೆಮ್ಮೆಮನೆ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಪ್ರೋತ್ಸಾಹ ಧನ, ಆರ್ಥಿಕ ನೆರವು ಜೊತೆಗೆ ಪ್ರೋತ್ಸಾಹ ನೀಡುವಲ್ಲಿ ಇವರು ಆದರ್ಶ ದಂಪತಿಗಳು ಎಂದರೆ ತಪ್ಪಾಗಲಾರದು.

ಸರಸ್ವತಿ ಇವರು ಹಳೆಯ ವಿದ್ಯಾರ್ಥಿಗಳು ಹಾಗೂ ದಾನಿಗಳ ಸಹಕಾರದಿಂದ ದತ್ತಿ ನಿಧಿ ಆರಂಭಿಸಿ ಶಾಲೆಗೆ ಸೇರುವ ಮಕ್ಕಳಿಗೆ 1000ರರೂ ಪ್ರೋತ್ಸಾಹಧನ, ವಾಹನ ವ್ಯವಸ್ಥೆ, ಇಂಟರ್ ಲಾಕ್ ಹೀಗೆ ಶಾಲೆಗೆ ಅಗತ್ಯವಿರುವ ಸಾಮಗ್ರಿ ಒದಗಿಸುವಲ್ಲಿ ಇವರ ಶ್ರಮವೆ ಹೆಚ್ಚು. ಇನ್ನು ಉತ್ತಮ ಶಿಕ್ಷಕಿ ಪ್ರಶಸ್ತಿಯೊಂದಿಗೆ ಬಂದ ನಗದು ಹಣವನ್ನು ಶಾಲೆಯ ಅಭಿವೃದ್ಧಿಗೆ ನೀಡಿದ್ದು ಇವರ ನಿಸ್ವಾರ್ಥ ಸೇವೆಗೆ ಉತ್ತಮ ಉದಾಹರಣೆಯಾಗಿದೆ.


