- ಜಲಾಶಯಗಳ ನೀರಿನ ಮಟ್ಟ ತಿಳಿಯಲು ಲಿಂಕ್ ಒತ್ತಿ

ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರ ಹಾಗೂ ಕೇರಳದಲ್ಲೂ ಮುಂಗಾರು ಬಿರುಸುಗೊಂಡಿರುವುದರಿಂದ ಜಲಾಶಯಗಳಿಗೆ ಬರುತ್ತಿರುವ ಒಳಹರಿವಿನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ.
ತುಂಗ & ಭದ್ರಾ ಡ್ಯಾಂ
ಶಿವಮೊಗ್ಗ ಜಿಲ್ಲೆಯಲ್ಲಿರುವ ತುಂಗಾ ಡ್ಯಾಂಗೆ ಈಗ 17,049 ಕ್ಯುಸೆಕ್ ಒಳ ಹರಿವು ಇದ್ದು, ಒಟ್ಟು 3.25 ಟಿಎಂಸಿ ಸಾಮರ್ಥ್ಯದ ಈ ಡ್ಯಾಂ ಈಗ ಪೂರ್ತಿ ತುಂಬಿದೆ. ಜೊತೆಗೆ, ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಬಿಆರ್‌ಪಿಯ ಭದ್ರಾ ಜಲಾಶಯ ಕೂಡ ಇದೀಗ ತುಂಬಿದ್ದು,ಡ್ಯಾಂಗೆ ಒಳ ಹರಿವು 8,777 ಕ್ಯುಸೆಕ್ ಇದೆ. ಹಾಗೇ 186 ಅಡಿ ಗರಿಷ್ಠ ಮಟ್ಟ ಹೊಂದಿರುವ ಈ ಡ್ಯಾಂನಲ್ಲಿ ಈಗ ಬರೋಬ್ಬರಿ 133 ಅಡಿ ನೀರು ಸಂಗ್ರಹ ಆಗಿದೆ. ಹಾಗೇ 22.436 ಟಿಎಂಸಿ ನೀರು ಇದೆ.
ಕೆ ಆರ್ ಎಸ್
ಜಲಾಶಯದಲ್ಲಿ 103.40 ಅಡಿ ನೀರಿದೆ. ಜಲಾಶಯಕ್ಕೆ ಬರುತ್ತಿರುವ ನೀರಿನ ಪ್ರಮಾಣವು 6600 ಕ್ಯೂಸೆಕ್. ಜಲಾಶಯದ ಗರಿಷ್ಟ ಮಟ್ಟವು 124.80 ಅಡಿ ಇದೆ. ಸದ್ಯ 25.594 ಟಿಎಂಸಿ ನೀರು ಸಂಗ್ರಹವಾಗಿದೆ.
ಆಲಮಟ್ಟಿ ಜಲಾಶಯ
ಆಲಮಟ್ಟಿಯ ಜಲಾಶಯಕ್ಕೆ 78668 ಕ್ಯೂಸೆಕ್ ನೀರು ಬರುತ್ತಿದೆ. ಇದು ಒಂದು ಲಕ್ಷ ಸಮೀಪಿಸುವ ಸೂಚನೆಗಳೂ ಇವೆ. ಜಲಾಶಯದ ನೀರಿನ ಮಟ್ಟವು 515.85 ಅಡಿಯಷ್ಟಿದೆ. ಗರಿಷ್ಟ ಮಟ್ಟವು 519.60 ಅಡಿ. ಸದ್ಯ 71.391 ಟಿಎಂಸಿ ನೀರು ಜಲಾಶಯದಲ್ಲಿ ಸಂಗ್ರಹವಾಗಿದೆ. ಅಂದರೆ ಶೇ. 60ರಷ್ಟು ಜಲಾಶಯವು ತುಂಬಿದೆ.
ಕಬಿನಿ ಜಲಾಶಯ
ಮೈಸೂರು ಜಿಲ್ಲೆಯ ಕಬಿನಿ ಜಲಾಶಯವು ಬಹುತೇಕ ಭರ್ತಿಯಾಗಿದೆ. ಜಲಾಶಯದಲ್ಲಿ ಮಂಗಳವಾರ ಬೆಳಿಗ್ಗೆ 2282.45 ಅಡಿ ನೀರು ಸಂಗ್ರಹವಾಗಿದೆ. ಜಲಾಶಯ ಗರಿಷ್ಠ ಮಟ್ಟವು 2284 ಅಡಿ. ಸದ್ಯ ಜಲಾಶಯಕ್ಕೆ 6148 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದಿಂದ 2000 ಕ್ಯೂಸೆಕ್ ನೀರನ್ನು ಕಪಿಲಾ ನದಿ ಮೂಲಕ ಹೊರ ಬಿಡಲಾಗುತ್ತಿದೆ. ಜಲಾಶಯದಲ್ಲಿ 18.52 ಟಿಎಂಸಿ ನೀರು ಸಂಗ್ರಹವಾಗಿದೆ.
ಕದ್ರಾ ಜಲಾಶಯ
ಉತ್ತರ ಕನ್ನಡ ಜಿಲ್ಲೆಯಲ್ಲೂ ಭಾರೀ ಮಳೆಯಾಗುತ್ತಿರುವುದರಿಂದ ಕಾರವಾರ ಸಮೀಪ ಇರುವ ಕದ್ರಾ ಜಲಾಶಯವೂ ತುಂಬಿದೆ. ಈ ಕಾರಣದಿಂದ ನೀರನ್ನು ಈಗಾಗಲೇ ಹೊರ ಹರಿಸಲಾಗುತ್ತಿದೆ. ನಾಲ್ಕು ಗೇಟುಗಳ ಮೂಲಕ 10600 ಕ್ಯೂ. ಮತ್ತು ವಿದ್ಯುತ್ ಉತ್ಪಾದಿಸಿ 21000 ಕ್ಯೂ. ನೀರನ್ನು ಕಾಳಿನದಿಗೆ ಬಿಡಲಾಗಿದೆ. ಸದ್ಯ ಇಲ್ಲಿ 31000 ಹೊರಹರಿವು, 22000 ಒಳಹರಿವು ಇದೆ.
ಹೇಮಾವತಿ ಡ್ಯಾಮ್
ಹಾಸನ ಜಿಲ್ಲೆಯ ಹೇಮಾವತಿ ಡ್ಯಾಂ ಒಟ್ಟು 37 ಟಿಎಂಸಿ ಸಾಮರ್ಥ್ಯ ಹೊಂದಿದೆ. ಈಗ ಡ್ಯಾಂಗೆ ಬರೋಬ್ಬರಿ 9,000 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಹೀಗೆ ಹೇಮಾವತಿ ಜಲಾಶಯದಲ್ಲಿ 19 ಟಿಎಂಸಿ ನೀರು ಸಂಗ್ರಹ ಆಗಿದೆ 2922 ಅಡಿ ಎತ್ತರ ಇರುವ ಈ ಡ್ಯಾಂಗೆ ಇದೀಗ 2898 ಅಡಿ ನೀರು ಬಂದಿದೆ.

