•40 ಸಾವಿರ ಹಣ ನೀಡಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ• ಸಪ್ತಮಿ ಟ್ರಸ್ಟ್ ನ ಆನಂದ್ ಅವರ ಕಾರ್ಯವೈಖರಿಗೆ ಎಲ್ಲೆಡೆ ಮೆಚ್ಚುಗೆ•

ತೀರ್ಥಹಳ್ಳಿ :ಗುಡ್ಡೇಕೇರಿ ಶ್ರೀಮತಿ ಕಾಡಮ್ಮ ಹೆಗ್ಗಡತಿ ಮತ್ತು ಶ್ರೀಮತಿ ರತ್ಮಮ್ಮ ವೆಂಕಪ್ಪ ಹೆಗಡೆ ಇವರ ಸ್ಮರಣಾರ್ಥ, ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿಯೂ ಸೇರಿದಂತೆ, ಆಗುಂಬೆ ಹೋಬಳಿಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅಧ್ಯಯನ ಮಾಡಿ, ಶೈಕ್ಷಣಿಕವಾಗಿ ಮತ್ತು ‌ಕ್ರೀಡೆ ಅಥವಾ ಸಹಪಠ್ಯ ಚಟುವಟಿಕೆಗಳಲ್ಲಿ ಆಯಾ ಶಾಲೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಪ್ರತಿ ವಿದ್ಯಾರ್ಥಿಗಳಿಗೂ ತಲಾ 2500/- ಪ್ರೋತ್ಸಾಹ ಧನವನ್ನು ವಿತರಿಸಲಾಯಿತು. ಗುಡ್ಡೇಕೇರಿ ಶಾಲೆಗೆ ಸೀಮಿತ ವಾಗಿದ್ದ ಈ ಕಾರ್ಯಕ್ರಮವನ್ನು ಆಗುಂಬೆ ಹೋಬಳಿಯ ಎಲ್ಲಾ ಶಾಲೆಗಳಿಗೂ ವಿಸ್ತರಿಸಲು ಯೋಚಿಸಿದ ಸಪ್ತಮಿ ಟ್ರಸ್ಟ್ ನ ಆನಂದ್ ಸರ್. ಮಯೂರ್ ಹೆಗಡೆ ಗುಡ್ಡೇಕೇರಿ, ಮಂಜುನಾಥ್ ಹೆಗಡೆ ಗುಡ್ಡೇಕೇರಿ ಹಾಗೂ ಎಲ್ಲಾ ಟ್ರಸ್ಟಿಗಳಿಗೂ ಈ ವೇಳೆ ಅಭಿನಂದನೆ ತಿಳಿಸಲಾಯಿತು.ಈ ವೇಳೆ ಒಟ್ಟು 16 ಜನ ಮಕ್ಕಳು ವಿದ್ಯಾರ್ಥಿ ವೇತನ ನೀಡಲಾಯಿತು.

ಇಂತಹ ಕಾರ್ಯಕ್ರಮಗಳ ಮೂಲಕ ಮಕ್ಕಳ ಕಲಿಕೆಗೆ ಇನ್ನಷ್ಟು ಉತ್ತೇಜನ ಸಿಗಲಿದೆ, ಮುಂದಿನ ದಿನಗಳಲ್ಲಿ ಇಂತಹ ಪ್ರೋತ್ಸಾಹದಿಂದ ಸಮಾಜಕ್ಕೆ ತಾವೆಲ್ಲರೂ ಪುನಃ ತಾವುಗಳು ಸಹಕಾರ ನೀಡಬೇಕೆಂದು ಸಪ್ತಮಿ ಟ್ರಸ್ಟ್ ನ ಆನಂದ್ ಅವರು ಮಕ್ಕಳಿಗೆ ಮಾರ್ಗದರ್ಶನ ಮಾಡಿದರು.

ಸಭೆಯಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಸುರೇಶ್ ಎಂ ಜಿ, ಎ ಪಿ ಎಂ ಸಿ ಮಾಜಿ ಅಧ್ಯಕ್ಷರಾದ, ಹಸಿರುಮನೆ ಮಹಾಬಲೇಶ್, ಸಪ್ತಮಿ ಟ್ರಸ್ಟ್ ನ ಆನಂದ್ ಬಿ ಎನ್, ಗುಡ್ಡೇಕೇರಿ ಮಂಜುನಾಥ್ ಹೆಗ್ಡೆ, ಮಯೂರ ಹೆಗ್ಡೆ, ಮುಖ್ಯ ಶಿಕ್ಷಕ ಮಂಜು ಬಾಬು ಹೆಚ್ ಪಿ ಶಿಕ್ಷಕರಾದ ಸುಬ್ರಹ್ಮಣ್ಯ ಎಸ್, ಆನಂದನ್ ಎ, ವಿರೇಶ್ ಟಿ, ಮಹಂತೇಶ್ ಬಿ, ಶೌಕತ್ ಆಲಿ, ಸೌಮ್ಯ ಎಲ್ ಎಲ್.. ಪೋಷಕರು ಮಕ್ಕಳು ಹಾಜರಿದ್ದರು.

Leave a Reply

Your email address will not be published. Required fields are marked *