
ತರೀಕೆರೆ ತಾಲ್ಲೂಕಿನ ಬೀರೂರು ವಲಯ ಬಳ್ಳಾವರದಲ್ಲಿ ನಡೆದ ಚಿಕ್ಕಮಗಳೂರು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ಅಭಿನಯ ಗೀತೆ ಸ್ಪರ್ಧೆಯಲ್ಲಿ ಕೊಪ್ಪ ತಾಲ್ಲೂಕನ್ನು ಪ್ರತಿನಿಧಿಸಿದ್ದ ನಿಲುವಾಗಿಲಿನ ಅನ್ನಪೂರ್ಣೇಶ್ವರಿ ವಿದ್ಯಾಮಂದಿರದ 7ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಆರಾಧ್ಯ ಜೆಪಿ ಇವಳು ದ್ವಿತೀಯ ಸ್ಥಾನ ಪಡೆದಿದ್ದಾಳೆ. ಆರಾಧ್ಯ ಆಗುಂಬೆ ಸಮೀಪದ ಜೇಡಿಕುಣಿ ಪೂರ್ಣೇಶ್ ಜಯಶ್ರೀ ದಂಪತಿಗಳ ಪುತ್ರಿ. ಮಗಳ ಈ ಸಾಧನೆಗೆ ಸೂಕ್ತ ತರಬೇತಿಯೊಂದಿಗೆ ಪ್ರೋತ್ಸಾಹ ನೀಡಿದ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಎಲ್ಲಾ ಶಿಕ್ಷಕ ವೃಂದದವರಿಗೆ ಧನ್ಯವಾದಗಳನ್ನು ಸತ್ಯಶೋಧ ನ್ಯೂಸ್ ಮಾಧ್ಯಮದ ಮೂಲಕ ತಿಳಿಸಿದ್ದಾರೆ.






