- ಅಬ್ಬಬ್ಬಾ ಇದೆಲ್ಲ ಹೌದ ಮೆನು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್

ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿರುವ ಸಮಯದಲ್ಲಿ ಇಂತಹ ಪ್ರಶ್ನೆ ಎಲ್ಲೆಡೆ ಸಹಜವಾಗಿ ಮಾತನಾಡುವ ಮಾತಾಗಿದೆ.ಜೈಲಿನ ಮೆನು ಪ್ರಕಾರ ವಾರದ ಏಳು ದಿನಗಳಲ್ಲಿ ಬೆಳಗ್ಗಿನ ಬ್ರೇಕ್‌ಫಾಸ್ಟ್ ತಿಂಡಿಯಲ್ಲಿ ವೆರೈಟಿ ಇರುತ್ತೆ. ಭಾನುವಾರ ಬೆಳಗ್ಗೆ ಎಲ್ಲರಿಗೂ 455 ಗ್ರಾಂ ಪಲಾವ್ ನೀಡಿದರೆ, ಸೋಮವಾರ 355 ಗ್ರಾಂ ಟೊಮೆಟೋ ಬಾತ್, ಮಂಗಳವಾರ 355 ಗ್ರಾಂ ಚಿತ್ರಾನ್ನ, ಬುಧವಾರ355 ಗ್ರಾಂ ಅವಲಕ್ಕಿ, ಗುರುವಾರ 355 ಗ್ರಾಂ ಪುಳಿಯೋಗರೆ, ಶುಕ್ರವಾರ 355 ಗ್ರಾಂ ಉಪ್ಪಿಟ್ಟು ಮತ್ತು ಭಾನುವಾರ 460 ಗ್ರಾಂ ವಾಂಗಿಬಾತ್ ನೀಡಲಾಗುತ್ತದೆ.ಕೈದಿಗಳಿಗೆ ಜೈಲಿನಲ್ಲಿ ಮಾಂಸಾಹಾರವನ್ನೂ ನೀಡಲಾಗುತ್ತದೆ. ಪ್ರತೀ ವಾರ ಶುಕ್ರವಾರದ ದಿನ 90 ಗ್ರಾಂ ಮಟನ್ ಅಥವಾ 115 ಗ್ರಾಂ ಚಿಕನ್ ನೀಡಲಾಗುತ್ತದೆ.ಜೊತೆಗೆ ಮಾಂಸಹಾರ ತಿನ್ನದೇ ಇದ್ದೋರಿಗೆ ಸ್ವೀಟ್ಸ್ ಕೂಡ ನೀಡಲಾಗುತ್ತದೆ.ಈ ಹಿಂದೆ ದರ್ಶನ್ ಮನೆ ಊಟಕ್ಕೆ ಬೇಡಿಕೆ ಇಟ್ಟಿದ್ದು ಇದೀಗ ಬಳ್ಳಾರಿ ಜೈಲಿನಲ್ಲಿ ಮೆನು ಸಮೇತ ಊಟ ಉಪಚಾರ ಸಿಗಲಿದೆ.







