

ಕನ್ನಡದ ಅಗ್ರಗಣ್ಯ ಕಾದಂಬರಿಕಾರರು, ಸರಸ್ವತಿ ಸಮ್ಮಾನ್ ಪುರಸ್ಕೃತ ಖ್ಯಾತ ಸಾಹಿತಿಗಳಾಗಿದ್ದ ಪದ್ಮಭೂಷಣ ಶ್ರೀ ಎಸ್. ಎಲ್. ಭೈರಪ್ಪ (94)ನಿಧನರಾಗಿದ್ದಾರೆ.

ತಮ್ಮ ಬರಹಗಳಲ್ಲಿ ವೈಚಾರಿಕತೆಯ ಮೆರುಗು ತುಂಬಿ ಜೀವನದ ಮೌಲ್ಯಗಳನ್ನು ತಿಳಿಸಿಕೊಟ್ಟ ಮೇಧಾವಿ ಇಂದು ಕೊನೆಯುಸಿರೆಳಿದ್ದು ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.

ಸಾಹಿತ್ಯ ಲೋಕವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಭೈರಪ್ಪ ಅವರ ಹಲವು ಕೃತಿಗಳು ಚಲನಚಿತ್ರವಾಗಿಯೂ ಮೂಡಿ ಬಂದಿವೆ.

