
ಶಿವಮೊಗ್ಗ : ಜಿಲ್ಲೆಯ ಶಿಕಾರಿಪುರದಲ್ಲಿ ಮಹಿಷಿ ಮಠದ ಡಕಾಯಿತಿ ಪ್ರಕರಣದ ಆರೋಪಿ ಶ್ರೀನಿವಾಸ್ ಮೇಲೆ ಮಾಲೂರು ಪೊಲೀಸ್ ಪಿ ಎಸ್ ಐ ಕುಮಾರ್ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ.

ಮಹಿಷಿ ಪ್ರಕರಣಕ್ಕೆ ಸಂಬಂಧಿಸಿದಂತೆ ಡಕಾಯಿತರನ್ನು ಹೆರೆಮುಡಿ ಕಟ್ಟಲು ಪೊಲೀಸರು ಬಲೆ ಬೀಸಿದ್ದು ಈ ಕಾರ್ಯಾಚರಣೆ ವೇಳೆ ಶ್ರೀನಿವಾಸ್ ಸಿಕ್ಕಿಬಿದ್ದಿದ್ದು ಪೊಲೀಸರು ಅರೆಸ್ಟ್ ಮಾಡಲು ಹೋದಾಗ ಪೊಲೀಸರ ಮೇಲೆ ಹಲ್ಲೆ ಮಾಡಲು

ಯತ್ನಿಸಿದ್ದು ಒಂದು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದಾಗ ಮತ್ತೆ ಹಲ್ಲೆ ಮಾಡಲು ಪ್ರಯತ್ನಿಸಿದಾಗ ಪಿ ಎಸ್ ಐ ಕುಮಾರ್ ಆರೋಪಿಯ ಎಡಗಾಲಿಗೆ ಗುಂಡು ಹರಿಸಿ ಬಂಧಿಸಿದ್ದಾರೆ.


