
ಶಿವಮೊಗ್ಗ :ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಬಸವಾನಿಯಲ್ಲಿ 7 ತರಗತಿಯಲ್ಲಿ ವ್ಯಾಸಂಗ ಮಾಡುತಿದ್ದ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಇಂದು ಶಾಲೆಯಲ್ಲಿ ಸಮುದಾಯದತ್ತ ಶಾಲೆ ಕಾರ್ಯಕ್ರಮ ನಡೆದಿದ್ದು, ವಿದ್ಯಾರ್ಥಿಗಳಿಗೆ ಮಾರ್ಕ್ಸ್ ಕಾರ್ಡ್ ಕೊಟ್ಟಿದ್ದು ಈ ವೇಳೆ ಇಂಚರ ಎಂಬ ಹುಡುಗಿ ಮಾರ್ಕ್ಸ್ ಕಡಿಮೆ ಬಂದ ಹಿನ್ನಲೆಯಲ್ಲಿ ಪೋಷಕರು ಕಡಿಮೆ ಮಾರ್ಕ್ ಯಾಕೆ ಬಂತು ಎಂದಿದ್ದಕ್ಕೆ ಮನ ನೊಂದು ವಿದ್ಯಾರ್ಥಿ ಆತ್ಮ ಹತ್ಯೆ ಮಾಡಿಕೊಂಡಿದ್ದಾಳೆ.

ಸದಾ ಚುರುಕು ಜೊತೆಗೆ ಕ್ರಿಯಾಶೀಲ ಚಟುವಟಿಕೆ ಹೊಂದಿದ್ದ ಇಂಚರ ಇಂದು ಬಾರದ ಲೋಕಕ್ಕೆ ಪಯಣಿಸಿದ್ದು ಹುಟ್ಟೂರಾದ ಹೊಳೆ ಕೊಪ್ಪ ದಲ್ಲಿ ನೀರವ ಮೌನ ಆವರಿಸಿದೆ. ಮೊದಲಿಗೆ ಮೃತದೇಹವನ್ನು ತೀರ್ಥಹಳ್ಳಿ ಜೆ ಸಿ ಆಸ್ಪತ್ರೆಗೆ ರವಾನಿಸಿದ್ದು ಪೋಸ್ಟ್ ಮಾಟಂ ಆದ ನಂತರ ಕುಟುಂಬದವರಿಗೆ ಹಸ್ತಾಂತರ ಮಾಡಿದ್ದು ನಂತರ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

