• ಪ್ರೀತಿಸಿದವಳನ್ನು ಸಾಯಿಸಿ ಮಣ್ಣಲ್ಲಿ ಹೂತಿಟ್ಟನ ಪಾಗಲ್ ಪ್ರೇಮಿ

ಸಾಗರ ತಾಲ್ಲೂಕಿನ ಆನಂದಪುರದಲ್ಲಿ ಪ್ರೀತಿಸಿ ವಿವಾಹವಾದ ಯುವತಿಯೊಬ್ಬಳನ್ನು ಪತಿ ಭೀಕರವಾಗಿ ಕೊಲೆ ಮಾಡಿ ಹೊತ್ತಿಟ್ಟ ಪ್ರಕರಣ ಬೆಳಕಿಗೆ ಬಂದಿದೆ.ಮೃತ ಯುವತಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣದ ಸೌಮ್ಯ. ಕೊಪ್ಪ ಪಟ್ಟಣದ ಖಾಸಗಿ ಫೈನಾನ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಸೌಮ್ಯ, ಅಲ್ಲಿಯೇ ಕೆಲಸ ಮಾಡುತ್ತಿದ್ದ ಸಾಗರ ಮೂಲದ ಸೃಜನ್ ಅಲಿಯಾಸ್ ಲೋಕೇಶ್ ಎಂಬಾತನನ್ನು ಪ್ರೀತಿ ಮಾಡಿದ್ದಳು. ಇಬ್ಬರೂ ಪರಸ್ಪರ ಪ್ರೀತಿ ಮಾಡಿದ್ದರಿಂದ ಇಬ್ಬರೂ ಮನೆಯವರ ವಿರೋಧದ ನಡುವೆಯೂ ಊರು ಬಿಟ್ಟು ಓಡಿ ಹೋಗಿ ಅಂತರ್ಜಾತಿ ಮದುವೆ ಮಾಡಿಕೊಂಡಿದ್ದರು.ಈ ಸಂಬಂಧ ಕೊಪ್ಪ ಪೊಲೀಸರು ಶಿವಮೊಗ್ಗದ ಆನಂದಪುರ ಪೊಲೀಸ್‌ ಠಾಣೆಯನ್ನು ಸಂಪರ್ಕಿಸಿದ್ದು ಹೆದ್ದಾರಿಪುರದಲ್ಲಿ ಮಹಜರ್‌ ಪ್ರಕ್ರಿಯೆ ನಡೆಯುತ್ತಿದೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಆನಂದಪುರ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಈ ವೇಳೆ ಆರೋಪಿ ಯುವಕ ಯುವತಿಯನ್ನ ಕೊಂದು ಆಕೆಯನ್ನು ಆನಂದಪುರದ ಮುಂಬಾಳು ಸಮೀಪ ಹೂತು ಹಾಕಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ.

Leave a Reply

Your email address will not be published. Required fields are marked *